ಪುರಭವನದಲ್ಲಿ ಸಂಭ್ರಮಿಸಿದ ಕಮಲಾಂಜಲಿ

0
7

ಗುರು ಕಮಲ ಭಟ್ ರವರಿಗೆ ಶಿಷ್ಯರಿಂದ ನೃತ್ಯಾರ್ಚನೆ ಕರಾವಳಿಯ ನೃತ್ಯ ಕ್ಷೇತ್ರಕ್ಕೆ ಪರಂಪರೆಯ ಪಂದನಲ್ಲೂರು ಶೈಲಿಯ ಕೊಡುಗೆ ನೀಡಿದ ಕಲಾ ಗುರು ಕೀರ್ತಿಶೇಷ ಕರ್ನಾಟಕ ಕಲಾ ವಿದುಷಿ ಕಮಲ ಭಟ್ ಕರ್ಣಾಟಕ ಬ್ಯಾಂಕ್ ಮಹಾಪ್ರಬಂಧಕ ವಿನಯ್ ಪಿ ಜೆ ನುಡಿದರು. ಅವರು ನಗರದ ಪುರಭವನದಲ್ಲಿ ಅವರ ಶಿಷ್ಯೆ ವಿದುಷಿ ವಿನಯರಾವ್ ಸಂಯೋಜಿಸಿದ್ದ ನಾಟ್ಯಾಲಯ ಉರ್ವ (ರಿ) ಸಂಸ್ಥಾಪಕಿ ಕೀರ್ತಿಶೇಷ ಕಮಲಾ ಭಟ್ ಸಂಸ್ಮರಣೆ ಕಮಲಾಂಜಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು, ಕಮಲ ಭಟ್ ರವರು ತನ್ನ ಆದರ್ಶ ನಡೆ ನುಡಿಗಳ ಮೂಲಕ ಎಲ್ಲರಿಗೂ ಮಾದರಿಯಾಗಿದ್ದರು ಎಂದರು.

ಶುಭಾಶಂಸನೆ ಮಾಡಿದ ಗುರು ಉಳ್ಳಾಲ ಮೋಹನ್ ಕುಮಾರ್ ತನ್ನ ಶಿಷ್ಯೆಯ ಗುರುಭಕ್ತಿಯ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ತುಮಕೂರಿನ ಸಾಯಿ ರಾಮನ್ ನೃತ್ಯ ಕೇಂದ್ರದ ನಿರ್ದೇಶಕ ಡಾ. ಸಾಗರ್ ಟಿ ಎಸ್ ಕಮಲದ ಹೂವು ಮತ್ತೊಂದು ಕಮಲದಿಂದ ಹುಟ್ಟಿದೆ ಎಂದು ಹೇಳಲಾಗುತ್ತಿದೆ. ಅಂತೆಯೇ ಕಮಲ ಟೀಚರ್ ಕಮಲದ ಹೂವಿನಂತೆ ಒಳ್ಳೆಯ ಶಿಷ್ಯವರ್ಗವನ್ನು ಸಮಾಜಕ್ಕೆ ಮತ್ತು ಕಲಾಪ್ರಪಂಚಕ್ಕೆ ನೀಡಿರುವರು. ಇದು ಕಲೆಯ ಬೆಳವಣಿಕೆ ಎಂದರು.

ಅವರ ಗರಡಿಯಲ್ಲಿ ಪಳಗಿದ 9 ಜನ ಹಿರಿಯ ಶಿಷ್ಯೆಯರು ಇಡೀ ಕಾರ್ಯಕ್ರಮದ ವೆಚ್ಚವನ್ನು ಭರಿಸಿ ಇಂತಹ ಸುಂದರ ಕಾರ್ಯಕ್ರಮವನ್ನು ಆಯೋಜಿಸಿದ್ದು ನಿಜಾರ್ಥದಲ್ಲಿ ಗುರುಗಳಿಗೆ ಸಲ್ಲುವ ‘ ಕಮಲಾಂಜಲಿ ‘ ಎಂದು ಪ್ರಸ್ತಾವಿಕ ಮಾತುಗಳನ್ನಾಡಿದ ಭರತಾಂಜಲಿ ಸಂಸ್ಥೆಯ ನಿರ್ದೇಶಕ ನೃತ್ಯ ಗುರು ಶ್ರೀಧರ ಹೊಳ್ಳ ನುಡಿದರು. ಹಿರಿಯ ಶಿಷ್ಯೆ ನೃತ್ಯ ಸುಧಾ ಸಂಸ್ಥೆಯ ವಿದುಷಿ ಸೌಮ್ಯ ಸುಧೀಂದ್ರ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ನಿರ್ದೇಶಕಿ ವಿನಯ ರಾವ್ ವಂದಿಸಿದರು ಕಾರ್ಯಕ್ರಮದಲ್ಲಿ ಕಲಾವಿದರು ವಿನಯ ರಾವ್ ಕೃಷ್ಣ ರಾವ್ ದಂಪತಿಗಳನ್ನು ಗೌರವಿಸಿದರು.

ವಿದುಷಿಯರಾದ ದೀಪಾ ಪ್ರವೀಣ್, ಅಂಜನ ವಿಶ್ವೇಶ ಭಟ್ , ಸಮೀಕ್ಷಾ ಆಚಾರ್ಯ, ದೀಕ್ಷಾ ಉಡುಪ , ಪ್ರತಿಕ್ಷ ರಾವ್, ಕೃಷ್ಣ ಎಂ ನಾಯರ್, ಹರ್ಷಿತ ಮಲ್ಯ, ದಿವ್ಯ ತಂತ್ರಿ ,ದೀಪ್ತ ಹೆಚ್ ಮನೋಜ್ಞವಾದ ನೃತ್ಯ ಕಾರ್ಯಕ್ರಮ ನೀಡಿದರು.