ಮಂಗಳೂರು ವಿವಿಯಲ್ಲಿ ನ.24ರಂದು ‘ಕನಕ ಕೀರ್ತನ ಗಂಗೋತ್ರಿ’: ಕನಕದಾಸರ ಕೀರ್ತನೆಗಳ ಸಾಮೂಹಿಕ ಗಾಯನ

0
12

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯ, ಕನಕದಾಸ ಸಂಶೋಧನ ಕೇಂದ್ರ, ಮಂಗಳಗಂಗೋತ್ರಿ ʻಕನಕ ಸಾಂಸ್ಕೃತಿಕ ನಿಘಂಟುʼ ಕೃತಿ ಲೋಕಾರ್ಪಣೆ ಮತ್ತು ʻಕನಕ ಜಯಂತಿ’ ಪ್ರಯುಕ್ತ 2026-27ನೇ ಸಾಲಿನ `ಕನಕ ಕೀರ್ತನ ಗಂಗೋತ್ರಿ’ಶೈಕ್ಷಣಿಕ ಸಂಸ್ಥೆಗಳ ಹಾಗೂ ಸಾರ್ವಜನಿಕರ ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಕನಕದಾಸರ ಕೀರ್ತನೆಗಳ ಸಮೂಹ ಗಾಯನ ಕಾರ್ಯಕ್ರಮವು 24 ನವೆಂಬರ್ 2026 ಮಂಗಳವಾರ ಪೂರ್ವಾಹ್ನ 10.00 ರಿಂದ ಪ್ರೊ. ಬಿ.ಎ. ವಿವೇಕ ರೈ ವಿಚಾರ ವೇದಿಕೆಯಲ್ಲಿ ನಡೆಯಲಿರುವುದು. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರಿನ ಹಿರಿಯ ವಿದ್ವಾಂಸರು, ಕರ್ನಾಟಕ ಸಂಸ್ಕೃತ ವಿ.ವಿಯ ವಿಶ್ರಾಂತ ಕುಲಪತಿಗಳಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಇವರು ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಸನ್ಮಾನ್ಯ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಇವರು ವಹಿಸಲಿರುವರು. ಕುಲಸಚಿವರಾದ ಶ್ರೀ ಸಂತೋಷ್ ಜಗಲಸಾರ ಕೆ.ಎ.ಎಸ್ ಶುಭಾಶಂಸನೆ ನೀಡಲಿರುವರು, ʻಕನಕ ಸಾಂಸ್ಕೃತಿಕ ನಿಘಂಟುʼ ಪ್ರಧಾನ ಸಂಪಾದಕರಾದ ಡಾ. ಎ.ವಿ. ನಾವಡ, ಸಂಪಾದಕರಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ, ಡಾ. ಅನಿಲಕುಮಾರ ಬೊಮ್ಮಾಘಟ್ಟ, ಡಾ. ರಾಧಾಕೃಷ್ಣ ಬೆಳ್ಳೂರು, ಡೀನರು ಕಲಾನಿಕಾಯ ಹಾಗೂ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಸೋಮಣ್ಣ ಹೊಂಗಳ್ಳಿ, ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಉಪಸ್ಥಿತರಿರುವರು.

ಉದ್ಘಾಟನಾ ಸಮಾರಂಭದ ಬಳಿಕ ‘ಕನಕ ಕೀರ್ತನ ಗಂಗೋತ್ರಿ’ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ಪ್ರೌಢಶಾಲೆ, ಪದವಿಪೂರ್ವ, ಸ್ನಾತಕೋತ್ತರ ಪದವಿ, ಅಧ್ಯಾಪಕ ವಿಭಾಗಗಳ್ಲಲ್ಲಿ ಮತ್ತು ಪದವಿ, ಸಿಬ್ಬಂದಿ, ಸಾರ್ವಜನಿಕ ಮಟ್ಟದಲ್ಲಿ ಕನಕದಾಸರ ಕೀರ್ತನೆಗಳ ʻಸಮೂಹ ಗಾಯನʼ ಕಾರ್ಯಕ್ರಮವು ನಡೆಯಲಿದೆ ಎಂದು ಕನಕದಾಸ ಸಂಶೋಧನ ಕೇಂದ್ರ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.