-ಮಂದಾರ ರಾಜೇಶ್ ಭಟ್
ಕಾವ್ಯ ಮತ್ತು ಸಂಗೀತದ ಸಮ್ಮಿಲನವಾದ ಗಮಕ ಕಲೆ ಕನ್ನಡ ಸಾಹಿತ್ಯದ ಅಮೂಲ್ಯ ಪರಂಪರೆ. ಈ ಕಲೆಯನ್ನು ಉಳಿಸಿ ಬೆಳೆಸುವ ಜೊತೆಗೆ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯದಲ್ಲಿ ತೊಡಗಿರುವ ಸಾಧಕರನ್ನು ಗೌರವಿಸುವುದು ಸಾಂಸ್ಕೃತಿಕ ಲೋಕದ ಮಹತ್ವದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಉಡುಪಿಯಲ್ಲಿ ದಿನಾಂಕ 14 ರಂದು ನಡೆದ ನಡೆದ ಗಮಕ ಕಾರ್ತಿಕ – 2026 ಕಾರ್ಯಕ್ರಮ ಗಮನ ಸೆಳೆಯಿತು.
ಶ್ರೀ ಅಭಿರಾಮ ಧಾಮ, ಸನಾತನ ಸಂಸ್ಕಾರ ಕೇಂದ್ರ, ಗುಂಡಿಬೈಲು ಹಾಗೂ ಉಡುಪಿ ಜಿಲ್ಲಾ ಗಮಕಕಲಾ ಅಭಿಮಾನಿ ಬಳಗದ ಸಹಯೋಗದಲ್ಲಿ ಗುಂಡಿಬೈಲಿನ ಅಭಿರಾಮ ಧಾಮದಲ್ಲಿ ಗಮಕ ಕಾರ್ತಿಕ – 2026 ಕಾರ್ಯಕ್ರಮ ನಡೆಯಿತು.
ಗಮಕ ಕಲೆಯ ಬೆಳವಣಿಗೆಗೆ ಸಲ್ಲಿಸಿದ ಸೇವೆಗಾಗಿ ಸತೀಶ್ ಕುಮಾರ್ ಕೆಮ್ಮಣ್ಣು ದಂಪತಿಗಳನ್ನು ಅಭಿನಂದಿಸಲಾಯಿತು
ಗಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ವಿತರಿಸಲಾಯಿತು.
ಪ್ರೊ. ಎಂ. ಎಲ್. ಸಾಮಗ ಅವರು ಅಭಿನಂದನಾ ಭಾಷಣ ಮಾಡಿದರು. ಹಿರಿಯ ಗಮಕ ಕಲಾವಿದೆ ಯಾಮಿನಿ ಭಟ್ ಮುಖ್ಯ ಅಭ್ಯಾಗತರಾಗಿದ್ದರು. ಡಾ. ಸುದರ್ಶನ ಪರ್ಲತ್ತಾಯ ಅಧ್ಯಕ್ಷತೆ ವಹಿಸಿದ್ದರು. ಡಾ. ರಾಘವೇಂದ್ರ ರಾವ್ ಸಂಯೋಜಿಸಿ ನಿರೂಪಿಸಿದರು ಕೃಷ್ಣಕುಮಾರ್ ಸ್ವಾಗತಿಸಿದರು ಡಾ. ಪ್ರಪುಲ್ಲಾ.ಜಿ. ಭಟ್ ವಂದಿಸಿದರು
ನಂತರ ಮಂಜುಳಾ ಸುಬ್ರಹ್ಮಣ್ಯ ಭಟ್ ಮಂಚಿ ಅವರಿಂದ ಕುಮಾರವ್ಯಾಸ ವಿರಚಿತ ಕರ್ಣಪರ್ವದ ಗಮಕ ವಾಚನ ಹಾಗೂ ಪ್ರೊ. ಸಾಮಗ ಅವರಿಂದ ವ್ಯಾಖ್ಯಾನ ನಡೆಯಿತು.
ಗಮಕ ಕೇವಲ ವಾಚನ ಕಲೆಯಲ್ಲ; ಅದು ಕನ್ನಡ ಕಾವ್ಯದ ಭಾವ, ರಸ ಮತ್ತು ತತ್ತ್ವಗಳನ್ನು ಸಂಗೀತದ ಮೂಲಕ ಜನಮನಕ್ಕೆ ತಲುಪಿಸುವ ವಿಶಿಷ್ಟ ಕಲೆ. ಇಂತಹ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಸಾಂಸ್ಕೃತಿಕ ಜವಾಬ್ದಾರಿ. ಸಾಧಕರನ್ನು ಗೌರವಿಸುವುದು, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಮತ್ತು ಗಮಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯ

