ಕಾಸರಗೋಡು : ಕನ್ನಡ ಭವನ ಪ್ರದಾನ ಕಾರ್ಯದರ್ಶಿ ವಸಂತ್ ಕೆರೆಮನೆ -ದಿವ್ಯ ಶ್ರೀ ದಂಪತಿಗಳಿಗೆ ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ ವತಿಯಿಂದ “ಕನ್ನಡ ಸೇವಾ ನಿರತರು “ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಸಂತ್ ಕೆರೆಮನೆ -ದಿವ್ಯ ಶ್ರೀ ದಂಪತಿಗಳಿಗೆ ಇವರ ವಿವಾಹ ವಾರ್ಷಿಕ ದಶಮಾನೋತ್ಸವ ಪ್ರಯುಕ್ತ ಕನ್ನಡ ಭವನದ ಅಭಿಮಾನಿಗಳ ಸವಿ ಸಂಭ್ರಮ ಕಾರ್ಯಕ್ರಮ ಬೇಕಲ್ ಇಂಟರ್ನ್ಯಾಷನಲ್ ಬೀಚ್ ನಲ್ಲಿ ನಡೆಯಿತು. ಕನ್ನಡ ಭವನದ ಗೌರವ ಅಧ್ಯಕ್ಷರಾದ ಪ್ರದೀಪ್ ಬೇಕಲ್ ಅಧ್ಯಕ್ಷತೆ ವಹಿಸಿದರು.
ರಾಮರಾಜ ಕ್ಷತ್ರಿಯ ಕಾಸರಗೋಡು ಅಧ್ಯಕ್ಷರೂ, ಕನ್ನಡ ಭವನ ಉಪಾಧ್ಯಕ್ಷರು ಆದ ವಿದ್ಯಾನಂದ ಹೂಡೆ,.ನಾರಾಯಣ ಆಚಾರ್ಯ, ಸರಸ್ವತಿ, ತೃಷನ್, ಕಾಸಿಂ ಪಾಲಕ್ಕುಂನ್ನು, ಭಾಗವಹಿಸಿದ್ದರು. ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕನ್ನಡ ಭವನ ಮುಖ್ಯಸ್ಥೆಯಾದ ಸಂಧ್ಯಾರಾಣಿ ಟೀಚರ್ ಈರ್ವರಿಗೂ ಶಾಲು ಹೊದಿಸಿ, ಹಾರಾರ್ಪಣೆ ಗೈದು, ಪ್ರಶಸ್ತಿ ಪತ್ರ ನೀಡಿದರು.
ವಿದ್ಯಾನಂದ ಹೂಡೆ ಸ್ಮರಣಿಕೆ ನೀಡಿ ಗೌರವಿಸಿದರು. ಕನ್ನಡ ಕಾಯಕದಲ್ಲಿ, ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯ ನಿರತರಾಗಿರುವ ವಸಂತ್ ಕೆರೆಮನೆ ದಂಪತಿಗಳಿಗೆ, ಈ ಪ್ರಶಸ್ತಿ, ಗೌರವಾರ್ಪಣೆ ಇನ್ನೂ ಹೆಚ್ಚಿನ ಸ್ಫೂರ್ತಿ ನೀಡಲಿ, ದಂಪತಿಗಳು ನೂರುಕಾಲ ಬಾಳಿ ತಮ್ಮ ಬದುಕನ್ನು ಸಾರ್ಥಕ ಗೊಳಿಸಲಿ ಎಂದು ಹಾರೈಸಿದರು. ಸಂಧ್ಯಾ ರಾಣಿ ಸ್ವಾಗತಿಸಿ, ವಿದ್ಯಾನಂದ ಹೂಡೆ ವಂದಿಸಿದರು ವಾಮನ್ ರಾವ್ ಬೇಕಲ್ ಕಾರ್ಯಕ್ರಮ ನಿರ್ವಹಣೆಗೈದರು.

