ಮಂಗಳೂರು : ರಾಜಾಜಿ ಪಾರ್ಕಿನಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ KSSAP ಪ್ರಶಸ್ತಿ

0
46

ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಪುರಭವನದ ಎದುರಿನ ರಾಜಾಜಿ ಪಾರ್ಕಿನಲ್ಲಿ ದಿನಾಂಕ 25-04-2026ನೇ ಶನಿವಾರ ಸಂಜೆ 5 ನಡೆಸುವ “ಕನ್ನಡ ಝೇಂಕಾರ” ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ, ತನ್ನ ವಿಶ್ರಾಂತ ಜೇವನದಲ್ಲೂ ಮಕ್ಕಳ ಬುದ್ದಿ ಮತ್ತೆ ವೃದ್ಧಿಸಲು 1400 ಕ್ಕು ಹೆಚ್ಚು ಉಪನ್ಯಾಸ ನೀಡಿರುವ /ನೀಡುತ್ತಿರುವ ಬೆಂಗಳೂರಿನ ಓಂಕಾರಪ್ರಿಯ ಬಾಗೇಪಲ್ಲಿಯವರಿಗೆ –KSSAP ಕನ್ನಡ ಕಣ್ಮಣಿ ಪ್ರಶಸ್ತಿ , ಕಾಸರಗೋಡಿನಲ್ಲಿ ಕನ್ನಡಕ್ಕಾಗಿ ಆಹರ್ನಿಸಿ ದುಡಿಯುವ / ದುಡಿಯುತ್ತಿರುವ ಡಾ.ವಾಮನ್ ರಾವ್ ಮತ್ತು ಸಂಧ್ಯಾ ರಾಣಿ ಯವರಿಗೆ – ಗಡಿನಾಡ ಕನ್ನಡ ಪೋಷಕ ಪ್ರಶಸ್ತಿ, ನಮ್ಮ ವಿಶ್ವ ದಾಖಲೆ ಗಾಯನ ಕಾರ್ಯಕ್ರಮದಲ್ಲಿ ನಿರಂತರ 12 ಗಂಟೆಗಳ ಕಾಲ ಒಂದು ಕ್ಷಣವೂ ಧ್ವನಿವರ್ಧಕದಲ್ಲಿ ಅಪಸ್ವರ ಬಾರದಂತೆ ಕರ್ತವ್ಯ ನಿರ್ವಹಿಸಿದ ಮಂಗಳೂರಿನ ಗಣೇಶ್ ಬಂಗೇರ ಇವರಿಗೆ – KSSAP ಸೂಪರ್ ಸೌಂಡ್ ಮಾಸ್ಟರ್ ಪ್ರಶಸ್ತಿ ಪ್ರದಾನ ನಡೆಯಲಿದೆ.

ಈ ಮಹತ್ವಪೂರ್ಣ ಕಾರ್ಯಕ್ರಮವನ್ನು ಸಂಜೆ 6 ಗಂಟೆಗೆ ಮೀನುಗಾರಿಕಾ ಮಹಾವಿದ್ಯಾಲಯದ ಮುಖ್ಯಸ್ಥ ಪ್ರೊ. ಆಂಜನೇಯಪ್ಪ ಉದ್ಘಾಟಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮ.ನ.ಪಾ. ನಗರ ಯೋಜನಾಧಿಕಾರಿ ನಾಗೇಂದ್ರ ಎನ್. ಕವಿ ಬರಹಗಾರ, ಶಿವಪ್ರಸಾದ್ ಕೊಕ್ಕಡ, ಸಾಮಾಜಿಕ ಚಿಂತಕ ರಂಜನ್ ಕುಮಾರ್, NSCDF ಅಧ್ಯಕ್ಷ ಗಂಗಾಧರ್ ಗಾಂಧಿ, ಭಾಗವಹಿಸಲಿದ್ದಾರೆ.

ಮಂಗಳೂರು ಸಹ್ಯಾದ್ರಿ ಕಾಲೇಜಿನ ಪ್ರಾದ್ಯಾಪಕಿ ಪ್ರೊ.ಅಕ್ಷಯ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಆಯಿಷಾ ಪೆರ್ನೆ, ಮೂಗಪ್ಪ ಗಾಳೇರ, ಆಕೃತಿ ಐ.ಎಸ್.ಭಟ್, ಮಂಡ್ಯ ಅನಾರ್ಕಲಿ ಸಲೀಂ, ಗಿರೀಶ್ ಪೆರಿಯಡ್ಕ, ತನ್ಸೀರಾ ಆತೂರು, ಸುಲೋಚನಾ ನವೀನ್ ಕೊಟ್ಟಾರ, ನಿರೀಕ್ಷಿತಾ ಮಂಗಳೂರು, ರಶ್ಮಿ ಸನಿಲ್, ಸುಖಲತ ಶೆಟ್ಟಿ. ರೇಖಾ ಸುದೇಶ್ ರಾವ್, ವ. ಉಮೇಶ್ ಕಾರಂತ, ಅನಿತಾ ಶೆಣೈ, ಎಂ.ಎ. ಮುಸ್ತಫಾ ಬೆಳ್ಳಾರೆ, ಓಂಕಾರಪ್ರಿಯ ಬಾಗೇಪಲ್ಲಿ, ಮುಂತಾದ ಕವಿಗಳು ಭಾಗವಹಿಸಲಿದ್ದಾರೆ.

ಕಾರ್ಯಕ್ರಮವನ್ನು ರಶ್ಮಿ ಸನಿಲ್ ನಿರೂಪಿಸಲಿದ್ದಾರೆ. ಅಲ್ಲದೆ ಎಂ. ಆರ್. ಗುರುರಾಜ್ ಕಾಸರಗೋಡು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಗೂ ಗಂಗಾಧರ್ ಗಾಂಧಿ, ನೇತ್ರಾ ಖುಷಿ ಮತ್ತು ದೃತಿ ಪಿ. ಶೆಟ್ಟಿ “ಬೆಳ್ಳಿ ತೆರೆಯ ಬಂಗಾರದ ಗೀತೆಗಳು” ಗೆ ಧ್ವನಿಯಾಗಲಿದ್ದಾರೆ ಎಂದು KSSAP ಕಾರ್ಯದರ್ಶಿ ಕಲಾವತಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here