
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ನ್ಯಾಯವಾದಿ ಎಂ. ಕೆ. ವಿಜಯ ಕುಮಾರ್ ರವರು ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನ್ಯಾಯಾಂಗ, ಶೈಕ್ಷಣಿಕ, ಧಾರ್ಮಿಕ, ಕ್ರೀಡೆ, ರಾಜಕೀಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಮಹಾನ್ ವ್ಯಕ್ತಿಯ ಸ್ಮರಣಾರ್ಥ ರಾಜ್ಯೋತ್ಸವದ ಸವಿನೆನಪಿಗಾಗಿ, ಕಾರ್ಕಳ ಸ್ವರಾಜ್ ಮೈದಾನದ ಬಳಿ ಕಾರ್ಕಳ ಆಸುಪಾಸಿನ ಜನತೆಗೆ ವಾಕಿಂಗ್ ಮಾಡಿ ಬಂದು ಆರಾಮವಾಗಿ ಕುಳಿತುಕೊಂಡು ಧನಿವಾರಿಸಿಕೊಳ್ಳಲು ಕಲ್ಲಿನ ಬೆಂಚುಗಳನ್ನು ಅವರ ಶಿಷ್ಯವೃಂದ ಮತ್ತು ಅಭಿಮಾನಿಗಳು ಕೊಡುಗೆಯಾಗಿ ನೀಡಿರುತ್ತಾರೆ.

ಈ ನೂತನ ಕಲ್ಲು ಬೆಂಚುಗಳ ಲೋಕಾರ್ಪಣೆಯನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ.ವಿ. ಸುನಿಲ್ ಕುಮಾರ್ ನೆರವೇರಿಸಿದರು.
ಕಾರ್ಕಳದಲ್ಲಿ ಎಂ. ಕೆ. ವಿಜಯ ಕುಮಾರ್ ಅವರು ಸಮಾಜಕ್ಕೆ ಮಾಡಿದ ಅನನ್ಯ ಕೆಲಸಗಳು ಮತ್ತು ಅವರ ಹೆಸರು ಶಾಶ್ವತವಾಗಿರಿಸುವಂತೆ ನೂತನ ಕಲ್ಲಿನ ಬೆಂಚುಗಳನ್ನು ಕೊಡುಗೆಯಾಗಿ ನೀಡುವಂತೆ ಮುತುವರ್ಜಿ ವಹಿಸಿ ಕೆಲಸ ಮಾಡಿದ ಪ್ರಕಾಶ್ ರಾವ್ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
