
ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಹಿತ್ಯ ಸಂಗೀತ ಸಂಭ್ರಮ ಕಾರ್ಯಕ್ರಮವು ಮಂಗಳೂರಿನ ಶಾರದಾ ವಿದ್ಯಾಲಯದ ಪ್ರಾಂಗಣದಲ್ಲಿ ನಡೆಯಿತು.
ಪದಾಧಿಕಾರಿ ರತ್ನಾವತಿ ಜೆ ಬೈಕಾಡಿ ಸುಮಧುರವಾದ ನಾಡಭಕ್ತಿಯ ಗೀತೆಗಳನ್ನು ಹಾಡಿದರು. ಬೆನೆಟ್ ಅಮ್ಮನ್ನ ಕನ್ನಡ ಪತ್ರಿಕೆ , ಗ್ರಂಥ ಸಂಪಾದನೆ ಮತ್ತು ಮುದ್ರಣ ಇತಿಹಾಸದ ಮೇಲೆ ಬೆಳಕು ಚೆಲ್ಲಿದರು. ಡಾ । ಮೀನಾಕ್ಷಿ ರಾಮಚಂದ್ರ , ‘ ದಕ್ಷಿಣ ಕನ್ನಡದಲ್ಲಿ ಕನ್ನಡ ಇಂದು ‘ ಎಂಬ ಬಗ್ಗೆ ಮಾತನಾಡಿದರು. ರಘು ಇಡ್ಕಿದು, ಸುಬ್ರಾಯ ಭಟ್, ಗಣೇಶಪ್ರಸಾದ್ ಜೀ, ಸುಖಲಾಕ್ಷಿ ಸುವರ್ಣ , ಕೃಷ್ಣಪ್ಪ ನಾಯ್ಕ್ ,ಸನತ್ ಕುಮಾರ್ ಜೈನ್ , ರವೀಂದ್ರನಾಥ್ ನಾಡು ನುಡಿಯ ಬಗ್ಗೆ ಅಭಿಮಾನದ ಮಾತುಗಳೊಂದಿಗೆ , ಹಾಡು , ಕವನ , ಚುಟುಕು ವಾಚನದ ಮೂಲಕ ಸಾಹಿತ್ಯಾಸಕ್ತರನ್ನು ರಂಜಿಸಿದರು.
ಕ.ಸಾ.ಪ. ಮಂಗಳೂರು ಘಟಕದ ಡಾ. ಮಂಜುನಾಥ ರೇವಣಕರ್ ಅಧ್ಯಕ್ಷತೆ ವಹಿಸಿ ರಾಜ್ಯೋತ್ಸವ ಸಂದೇಶ ನೀಡಿದರು. ಪ್ರಧಾನ ಕಾರ್ಯದರ್ಶಿ ಡಾ. ಮುರಲಿಮೋಹನ ಚೂಂತಾರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕೋಶಾಧಿಕಾರಿ ಸುಬ್ರಾಯ ಭಟ್ ನಿರೂಪಿಸಿದರು. ಇನ್ನೋರ್ವ ಕಾರ್ಯದರ್ಶಿ
ಗಣೇಶಪ್ರಸಾದ್ ಜೀ ವಂದಿಸಿದರು.
