ಕಾಪು : ಜೂನ್ 26ರಂದು ಶ್ರೀ ನಾರಾಯಣ ಗುರು ಟ್ರೋಫಿ ಓಪನ್ ಹಾಗೂ ವಯೋಮಿತಿ ಚೆಸ್ ಸ್ಪರ್ಧೆ

0
17

ಕಾಪು : ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್, ಕಾಪು ಹಾಗೂ ಶ್ರೀ ನಾರಾಯಣ ಗುರು ಸ್ಪೋರ್ಟ್ಸ್ & ಎಜುಕೇಶನ್ ಟ್ರಸ್ಟ್, ಕಾಪು ಇದರ ಅಂಗಸಂಸ್ಥೆಯ ವತಿಯಿಂದ, ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಸಹಕಾರದಲ್ಲಿ “ಶ್ರೀ ನಾರಾಯಣ ಗುರು ಟ್ರೋಫಿ ಓಪನ್ ಹಾಗೂ ವಯೋಮಿತಿ ಚೆಸ್ ಸ್ಪರ್ಧೆ” ಜೂನ್ 26ರಂದು ಕಾಪುವಿನ ಶ್ರೀ ಹಳೇ ಮಾರಿಯಮ್ಮ ಸಭಾಗೃಹದಲ್ಲಿ ನಡೆಯಲಿದೆ.

ಬೆಳಿಗ್ಗೆ 9 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಅಫಿಲಿಯನ್ಸ್ ಟೆಕ್ನಾಲಜಿ, ಮಂಗಳೂರು ಸಂಸ್ಥಾಪಕರಾದ ಅವಿನಾಶ್ ಶೆಟ್ಟಿ ವಹಿಸಲಿದ್ದು, ನಿವೃತ್ತ ಉಡುಪಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸೀತಾನದಿ ವಿಠಲ ಶೆಟ್ಟಿ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಉಮಾನಾಥ ಕಾಪು, ಕಾರ್ಯದರ್ಶಿ ಸಿದ್ಧಕೃಷ್ಣ, “ಆಸರೆ” ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕ ಪೆನ್ಸಿಲ್ ಸೋನ್ಸ್ ಭಾಗವಹಿಸಲಿದ್ದಾರೆ.

ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಉಮಾನಾಥ ಕಾಪು ವಹಿಸಲಿದ್ದು, ಉದ್ಯಮಿ ಪ್ರಭಾಕರ್ ಪೂಜಾರಿ, ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಮೊಕೇಸರ ರಾಜೇಶ್, ಶ್ರೀ ಸಿದ್ಧಿ ವಿನಾಯಕ ಚೆಸ್ ಅಕಾಡೆಮಿ ಸ್ಥಾಪಕ ಬಾಬು ಜೆ. ಪೂಜಾರಿ, ಎಸ್‌ಬಿಐ ಕಾಪುನ ಸುನೀಲ್ ಪೂಜಾರಿ ಹಾಗೂ ನಾಗೇಶ್ ಕಾರಂತ್ ಬಹುಮಾನ ವಿತರಿಸಲಿದ್ದಾರೆ.

LEAVE A REPLY

Please enter your comment!
Please enter your name here