Saturday, June 14, 2025
HomeUncategorizedಜೂ.8ರಂದು ಕಯ್ಯಾರರ ಜನ್ಮದಿನ ಸಂಭ್ರಮ

ಜೂ.8ರಂದು ಕಯ್ಯಾರರ ಜನ್ಮದಿನ ಸಂಭ್ರಮ

ಕಾಸರಗೋಡು : ಇಲ್ಲಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಬಯಲು ರಂಗ ಮಂದಿರದಲ್ಲಿ ಜೂ.8ರಂದು ಕಯ್ಯಾರ ಕಿಂಞಣ್ಣ ರೈ ಜನ್ಮದಿನೋತ್ಸವ ಸಂಭ್ರಮ- 2025 ನಡೆಯಲಿದೆ. ಕನ್ನಡ ಭವನ ಹಾಗೂ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಕಯ್ಯಾರರು ರಚಿಸಿದ ಹಾಡುಗಳ ಗಾಯನ, ಕಯ್ಯಾರರ ಕುರಿತ ಕವನ ವಾಚನ ಕಯ್ಯಾರರ ಕುರಿತ ಭಾಷಣ, ಕಯ್ಯಾರರ ಕುರಿತ ಚಿತ್ರ ರಚನೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮೂಹ ನೃತ್ಯ, ನೃತ್ಯ, ಭಜನೆ, ಕುಣಿತ ಭಜನೆ ನಡೆಯಲಿದೆ. ಅಸಕ್ತರು ಹೆಚ್ಚಿನ ಮಾಹಿತಿಗೆ 9633073400 ಅಥವಾ 9446282641 ಸಂಖ್ಯೆಯನ್ನು ಸಂಪರ್ಕಿಸಬೇಕೆಂದು ಕನ್ನಡ ಭವನದ ಸ್ಥಾಪಕಾಧ್ಯಕ್ಷ ಡಾ. ಕೆ ವಾಮನ್ ರಾವ್ ಬೇಕಲ್ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular