ನರಿಕೊಂಬುವಿನಲ್ಲಿ ಕೂಟ ಮಹಾಜಗತ್ತು ಬಂಟ್ವಾಳದ ಸಂಪರ್ಕ ಸಭೆ

0
71

ಕೂಟ ಮಹಾ ಜಗತ್ತು ಬಂಟ್ವಾಳ ಅಂಗ ಸಂಸ್ಥೆಯ 22ನೆಯ ಸಂಪರ್ಕ ಸಭೆ ನರಿ ಕೊಂಬು ಗ್ರಾಮದ ಸಪ್ತ ಶ್ರೀ ಬಿಲ್ಡರ್ಸ್ , & ಡೆವಲ ಪರ್ಸ್,ಮಾಲೀಕಶ್ರೀನಿಧಿ ಭಟ್ ಮನೆಯಲ್ಲಿ ಕೂಟ ಮಹಾಜಗತ್ತು ಬಂಟ್ವಾಳ ಅಂಗ ಸಂಸ್ಥೆ ಅಧ್ಯಕ್ಷಕೆರಮೇಶ್ ಹೊಳ್ಳ ಅಧ್ಯಕ್ಷತೆ ವಹಿಸಿಸೆಪ್ಟೆಂಬರ್ 27ರ ಮಂಗಳೂರಿನಲ್ಲಿ ನಡೆಯುವ ಕೇಂದ್ರ ಸಮಿತಿಯ ಮಹಾಸಭೆಯ ಮಾಹಿತಿ ನೀಡಿದರು ಶ್ರೀ ಗುರು ನರಸಿಂಹ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪ್ರಕಾಶ್ ಕಾರಂತ ನರಿ ಕೊಂಬು ಸಭೆಯಲ್ಲಿ ಭಾಗವಹಿಸಿ ದೇವಸ್ಥಾನದ ಅಭಿವೃದ್ಧಿಯ ಕಾರ್ಯಗಳ ಮಾಹಿತಿ ಪ್ರಸ್ತುತ ದೇವಾಲಯದ ವಿದ್ಯಮಾನಗಳ ಚಿತ್ರಣ ಸವಿವರವಾಗಿ ನೀಡಿದರು ಮುಂಬೈ ಅಂಗ ಸಂಸ್ಥೆಪ್ರತಿನಿಧಿ ಸೂರ್ಯನಾರಾಯಣ ಹೊಳ್ಳ ಬ್ರಾಹ್ಮಣ ಸಮಾಜದ ಯುವ ಜನತೆಯ ವಿವಾಹ ಸಂಪರ್ಕ ಮಾಹಿತಿ ನೀಡಿದರು ಗೌರವಾಧ್ಯಕ್ಷ ಜಯಶಂಕರ ಭಾಸ್ರಿ ತಾಯ, ಸಜಿೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಜಿಲ್ಲಾ ಅರ್ಚಕ ಮತ್ತು ಪುರೋಹಿತ ಪರಿಷತ್ ಅಧ್ಯಕ್ಷಕರ್ಬೆಟ್ಟು ಕೃಷ್ಣರಾಜ ಬಟ್, ಗಾಯತ್ರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾರಾಯಣ ಸೋಮಯಾ ಜಿ, ಪದಾಧಿಕಾರಿಗಳಾದ ಎಂರಾಮಕೃಷ್ಣ ರಾವ್, ಎ ರವಿಶಂಕರ ಮೈಯ್ಯ, ಎಂ ಜಯರಾಮ ಮಯ್ಯ,ಜಗದೀಶ ಹೊಳ್ಳ ,ಮಹಿಳಾ ಸಮಿತಿ ಅಧ್ಯಕ್ಷ ಯಮುನಾ ಐಗಳ್, ಉಪಾಧ್ಯಕ್ಷೆ ಜಯಲಕ್ಷ್ಮಿ ರಾವ್,ನರೇಶ ಹೊಳ್ಳ, ಮೊದಲಾದವರು ಉಪಸ್ಥಿತರಿದ್ದರು.