“ಆರೋಗ್ಯಕ್ಕಾಗಿ ಮುದ್ರೆಗಳು” ಪುಸ್ತಕ ಬಿಡುಗಡೆ : ಯೋಗ ಮತ್ತು ಮುದ್ರೆಗಳು ಆರೋಗ್ಯಕರ ಜೀವನದತ್ತ ಕೊಂಡೊಯ್ಯುವ ಸರಳ ಸಾಧನಗಳು –ಸ್ವಾಮಿಜಿತಕಾಮಾನಂದಜಿ

0
8

ಮಂಗಳೂರು : ದೇಲಂಪಾಡಿಯೋಗ ಪ್ರತಿಷ್ಠಾನ ವತಿಯಿಂದ “ಆರೋಗ್ಯಕ್ಕಾಗಿ ಮುದ್ರೆಗಳು” ಪುಸ್ತಕ ಬಿಡುಗಡೆ ಸಮಾರಂಭವುಜುಲೈ 17ರಂದುಅಮೃತ ಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ “ಆರೋಗ್ಯಕ್ಕಾಗಿ ಮುದ್ರೆಗಳು” ಪುಸ್ತಕವನ್ನುರಾಮಕೃಷ್ಣ ಮಠದಅಧ್ಯಕ್ಷರಾದ ಸ್ವಾಮಿಜಿತಕಾಮಾನಂದಜಿಅವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದಅವರು, ಭಾರತೀಯ ಋಷಿ ಪರಂಪರೆಯಯೋಗ ಮತ್ತು ಮುದ್ರೆಗಳು ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕಆರೋಗ್ಯವನ್ನು ವೃದ್ಧಿಸುವ ಅಮೂಲ್ಯ ಸಾಧನಗಳಾಗಿದ್ದು, ಇವುಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಆರೋಗ್ಯಕರ ಹಾಗೂ ಸಮತೋಲನಯುತ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಜೀವರಾಜ್ ಸೊರಕೆ, ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕರು, ಎಸ್.ಸಿ.ಎಸ್. ಆಸ್ಪತ್ರೆ, ಮಂಗಳೂರು ಅವರು ಮಾತನಾಡಿ, ಆಧುನಿಕಜೀವನ ಶೈಲಿಯಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಯೋಗ, ಮುದ್ರೆಗಳು ಹಾಗೂ ಆರೋಗ್ಯಕರ ಜೀವನಶೈಲಿ ಯನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯಎಂದು ಅಭಿಪ್ರಾಯಪಟ್ಟರು.


ಯೋಗಗುರು ಹಾಗೂ ಪುಸ್ತಕದ ಲೇಖಕರಾದಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರು “ಯೋಗ, ಮುದ್ರೆಗಳು ಮತ್ತು ಆರೋಗ್ಯಕರ ಜೀವನಶೈಲಿ” ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ, ವಿವಿಧ ಮುದ್ರೆಗಳ ಮಹತ್ವ, ಅವುಗಳ ಆರೋಗ್ಯ ಪ್ರಯೋಜನಗಳು ಹಾಗೂ ದೈನಂದಿನ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವ ವಿಧಾನಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಡಾ. ಸುರೇಶ್‌ದೇಲಂಪಾಡಿ, ಪ್ರಾಧ್ಯಾಪಕರು, ಆರ್.ಎನ್.ಎಸ್. ತಾಂತ್ರಿಕ ವಿದ್ಯಾಲಯ, ಬೆಂಗಳೂರು ಹಾಗೂ ಪ್ರಸನ್ನ ಕೆ., ಮಾಲಕರು, ಮಧುಬನ್ ಗ್ರಾಫಿಕ್ಸ್, ಮಂಗಳೂರು ಹಾಗೂ ಯೋಗರತ್ನಗೋಪಾಲಕೃಷ್ಣದೇಲಂಪಾಡಿಅವರ ಪತ್ನಿ ವೀಣಾದೇಲಂಪಾಡಿಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಯೋಗಾಭ್ಯಾಸಿಗಳು, ವೈದ್ಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ದೇಲಂಪಾಡಿಯೋಗ ಪ್ರತಿಷ್ಠಾನ ಹಾಗೂ ಶಿಷ್ಯವೃಂದದ ಸದಸ್ಯರು ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಸಹಕರಿಸಿದರು.