ಮಂಗಳೂರು ನಗರದ ಗುಡ್ಡ ಕುಸಿತ , ಕೃತಕ ನೆರೆ ಹಾವಳಿಗೆ ಶಾಸಕ ವೇದವ್ಯಾಸ ಕಾಮತ್ ರವರು ಅನುಷ್ಠಾನಗೊಳಿಸಿದ ಕ್ಷೇತ್ರದ ಕಾಮಗಾರಿಗಳ ವಿಫಲತೆಯೇ ಕಾರಣ – ವಿಧಾನ ಪರಿಷತ್ ಶಾಸಕಐವನ್ ಡಿʼಸೋಜಾ.

0
37

2019 ರಿಂದ 2023ರವರೆಗೆ ರಾಜ್ಯದ ಬಿಜೆಪಿ ಆಡಳಿತ ಸರಕಾರ ಮತ್ತು ಕಳೆದ 10 ರ‍್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆಯ ಬಿ.ಜೆಪಿ ಆಡಳಿತದಿಂದ ನಗರದ ಏಲ್ಲಾ ರಾಜಕಾಲುವೆಗಳು ಮತ್ತು ನೀರು ಹರಿಯುವ ತೋಡುಗಳ ಅಗಲತೆಯು ಕಡಿಮೆಯಾಗಿ, ಕಳಪೆ ಕಾಮಗಾರಿಗಳನ್ನು ನಡೆಸಿ ಸರಕಾರಿ ಹಣವನ್ನು ಪೋಲು ಮಾಡುವುದರ ಮೂಲಕ ಮತ್ತು ಅವೈಜ್ಞಾನಿಕವಾಗಿ, ಮಂಗಳೂರು ಮಹಾನಗರ ಪಾಲಿಕೆಯ ಕಾಮಗಾರಿಗಳ ಅನುಷ್ಠಾನವೇ ಇಂದಿನ ಕೃತಕ ನೆರೆ ಮತ್ತು ಭೂ ಕುಸಿತಕ್ಕೆ ಮುಖ್ಯ ಕಾರಣವಾಗಿರುತ್ತದೆ. ಬಿಜೆಪಿಯ 9 ರ‍್ಷಗಳ ಆಡಳತದಲ್ಲಿ ಮತ್ತು ಹತ್ತು ರ‍್ಷ ಮಹಾನಗರ ಪಾಲಿಕೆ ಅಡಳಿತದಲ್ಲಿ ಯಾವುದೆಲ್ಲ ಕಾಮಗಾರಿಗಳು ನಡೆಯಲ್ಪಟ್ಟಿದೆ ಮತ್ತು ಅದರಿಂದ ನೆರ ಹಾವಳಿ ಬಾರದಂತೆ ಯಾವ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದೀರಿ ? ಎಂದು ದಕ್ಷಿಣ ವಿದಾನಸಭಾ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್ ರವರು ಸರ‍್ವಜನಿಕರಿಗೆ ಮುಖ್ಯವಾಗಿ ತಿಳಿಸಲೇಬೇಕಾಗಿದೆ.
ಮಂಗಳೂರು ಮಹಾನಗರ ಪಾಲಿಕೆ ಮೂಲಕ ಎಲ್ಲಾ ಅನುದಾನವನ್ನು ಶಾಸಕರು ಯಾವ ಯಾವ ಕಾಮಗಾರಿಗಳಿಗೆ ವಿತರಿಸಿದ್ದಾರೆ ಎಂಬುದರ ಬಗ್ಗೆ ದಾಖಲೆಗಳನ್ನು ತಿಳಿಸಲಿ ? ರಾಜ್ಯ ಬಿಜೆಪಿ ಸರಕಾರದ ಅವಧಿಯಲ್ಲಿ 75 ಕೋಟಿ ವಿಶೇಷ ಅನುದಾನವನ್ನು ಅನುಷ್ಠಾನಗೊಳಿಸಿದ ಬಗ್ಗೆ ಮಂಗಳೂರಿನ ರಾಜಕಾಲುವೆಯಗಳು ಹಾಗೂ ಮಳೆಗಾಲದ ಕೃತಕ ನೀರು ಸರಿಯಾಗಿ ಹರಿದು ಹೋಗುವರೇ ಯಾವ ಕ್ರಮವನ್ನು ಕೈಗೊಂಡಿದ್ದೀರಿ? ಈ ಬಗ್ಗೆ ಸಂಪರ‍್ಣ ವಿವರವಾದ ರ‍್ಚೆ ನಡೆಯಲಿ……
ಮಂಗಳೂರು ನಗರದ ವರ‍್ಡ್ ನಂ. 25 ದೇರೆಬೈಲ್ ಪಶ್ಚಿಮ ಶೇಡಿಗುರಿ ಈರಿ ಪ್ರದೇಶದಲ್ಲಿ ನರ‍್ಮಿಸಿದ ರಾಜ ಕಾಲುವೆಯ ಸಣ್ಣ ಸೇತುವೆಯ ಕಾಮಗಾರಿಯೂ ಇಂದು ಏನಾಗಿದೆ ? ಇದಕ್ಕೆ ಶಾಸಕರಾದ ವೇದವ್ಯಾಸ್ ಕಾಮತ್ ರವರು ಈ ಬಗ್ಗೆ ಕೂಡಲೇ ಸ್ಥಳ ಪರಿಶೀಲನೆ ಮಾಡಿ. ಕಾಮಗಾರಿಗಳ ಬಗ್ಗೆ ವಿಶ್ಲೇಷಣೆ ಮಾಡಲಿ…….
ರಾಜ್ಯ ಸರಕಾರದಿಂದ ನಡೆಯುವ ಕಾಮಗಾರಿಗಳು ಶಾಸಕರಾಗಿ ನೀವು ಸೂಚಿಸಿದ ಕಾಮಗಾರಿಗಳು ನೆರೆಹಾವಳಿಯನ್ನು ತಡೆಯುವ ಕಾಮಗಾರಿಗಳ ಪಟ್ಟಿಯಲ್ಲಿ ಇದೆಯೇ? ಇದನ್ನು ಸರ‍್ವಜನಿಕರ ಗಮನಕ್ಕೆ ತನ್ನಿರಿ…. ರಾಜ್ಯ ಸರಕಾರ ಬಿಡುಕಾಸು ಬಿಡುಗಡೆ ಮಾಡಿಲ್ಲ ಎಂದು ತಾವುಗಳು ತಮ್ಮ ಪತ್ರಿಕಾ ಹೇಳಿಕೆಯ ಮುಖಾಂತರ ಸುಳ್ಳು ಆರೋಪ ಮಾಡಿದ್ದೀರಿ ತಾವುಗಳು ಶಾಸಕರಾಗಿ ಕರ‍್ಯನರ‍್ವಹಿಸಲು ಅಸರ‍್ಥರು ಎಂಬುದು ತಮ್ಮ ಹೇಳಿಕೆಯ ಮುಖಾಂತರ ಎತ್ತಿ ತೋರಿಸುತ್ತದೆ. ಕ್ಷೇತ್ರದ ಅಭಿವೃದ್ದಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಬಿಡುಗಡೆಗೆ ನಿಮ್ಮ ಪ್ರಯತ್ನವಾದರೂ ಏನು? ತಮ್ಮ ಮಹಾನಗರ ಪಾಲಿಕೆ ಅಡಳಿತದಲ್ಲಿ ಮಳೆಗಾಲದ ಮುಂಜಾಗೃತಾಕ್ರಮವಾಗಿ ನೀವು ಈ ಕಾಮಗಾರಿಗಳನ್ನು ನಡೆಸಬಹುದಿತ್ತಲ್ಲವೇ?
ಇದೀಗ ತಮ್ಮ ಉತ್ತರವನ್ನು ಬಯಸುತ್ತೇವೆ. ಮಳೆಹಾನಿ ಕಾಮಗಾರಿಗೆ ದ.ಕ. ಜಿಲ್ಲೆಗೆ ಈಗಾಗಲೇ ರೂ.21ಕೋಟಿ ಹಣವು ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ ಕೇಂದ್ರ ರ‍್ಕಾರ ಮತ್ತು ರಾಜ್ಯ ರ‍್ಕಾರದ ನಿಯಮದಂತೆ ನರೆಹಾವಳಿಯಿಂದ ಉಂಟಾದ ಎಲ್ಲಾ ನಷ್ಟಗಳಿಗೆ ಪರಿಹಾರವನ್ನು ವಿತರಿಸುವರೇ ಸಾಕಷ್ಟು ಹಣವು ಸರಕಾರದ ಖಾತೆಯಲ್ಲಿ ಇದೆ ಇನ್ನು ಮುಂದಕ್ಕೆ ಹಣದ ಅಗತ್ಯವಿದ್ದರೆ ಅದರ ಸಂಪರ‍್ಣ ಜವಬ್ದಾರಿಯನ್ನು ರಾಜ್ಯ ರ‍್ಕಾರ ಕೈಗೊಳ್ಳುತ್ತದೆ ಎಂದು ತಮಗೆ ತಿಳಿದಿರಲಿ.
ದ.ಕ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದ್ದಾರೆ.ನಮ್ಮ ಸರಕಾರವು ಮಳೆಗಾಲದಲ್ಲಿ ಸರ‍್ವಜನಿಕರ ಜೀವಹಾನಿಯಾಗದಂತೆ ತಡೆಯಲು ಪ್ರಯತ್ನಿಸುತ್ತದೆ ಎಂದು ಐವನ್ ಡಿʼಸೋಜಾ ತಿಳಿಸಿದ್ದಾರೆ. ತಾವು ಶಾಸಕರಾಗಿ ಶಿಫಾರಸ್ಸು ಮಾಡಿದ ನಿಯಾಮಾವಳಿಗಳ ಪ್ರಕಾರ ಯಾವ ನಷ್ಟವನ್ನು ಪರಿಹಾರ ರೂಪದಲ್ಲಿ ನೀಡಿಲ್ಲವೆಂದು ಶಾಸಕರು ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ದೊರಕಿಸಿಕೊಡುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ತನಗೆ ಕೊಟ್ಟ ಕುದುರೆಯನ್ನು ಒಡಿಸಲಾರದವನು ಇನ್ನೊಬ್ಬರ ಕುದುರೆಯನ್ನು ಬಯಸುವವನು ವೀರನು ಅಲ್ಲ ಶೂರನು ಅಲ್ಲ ಈ ಬಗ್ಗೆ ಶಾಸಕರ ಅಸರ‍್ಥ ಹೇಳಿಕೆಗೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರು ಪ್ರತಿಕ್ರಿಯೆ ನೀಡಿದ್ದಾರೆ.

LEAVE A REPLY

Please enter your comment!
Please enter your name here