ವೇಣೂರು ಬರ್ಕಜೆ ಡ್ಯಾಂ ಬಳಿ ಫಲ್ಗುಣಿ ನದಿಯಲ್ಲಿಮುಳುಗಿ ಮೃತಪಟ್ಟ ಮೂವರು ವಿದ್ಯಾರ್ಥಿಗಳ ಕುಟುಂಬಗಳಿಗೆ ಮೂಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ. 2.00ಲಕ್ಷ ದಂತೆ ರೂ.6.00ಲಕ್ಷ ರೂ. ಹಣವನ್ನು ನೊಂದವರ ಕಟುಂಬಗಳಿಗೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾ ವಿತರಣೆ.
ದ.ಕ. ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರು ಬರ್ಕಜೆ ಡ್ಯಾಂ ಬಳಿ ಫಲ್ಗುಣಿ ನದಿಯಲ್ಲಿ ಮುಳುಗಿ ಮೃತಪಟ್ಟ ಮೂವರು ವಿದ್ಯಾರ್ಥಿಗಳ ಕಟುಂಬಗಳಿಗೆ ರೂ.2.00ಲಕ್ಷದಂತೆ ರೂ.6.00ಲಕ್ಷ ರೂಪಾಯಿ ನೇರವಾಗಿ ಕಟುಂಬಸ್ಥರ ಖಾತೆಗೆ ವರ್ಗಾವಣೆಯಾಗಿದ್ದು, ಕರನಾಟಕ ರಾಜ್ಯದ ಮುಖ್ಯಮಂತ್ರಿಯವರ ಸಾಂತ್ವನದೊಂದಿಗೆ ಮಂಜೂರಾತಿ ಪತ್ರವನ್ನು ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿʼಸೋಜಾರವರು ತಮ್ಮ ಮಹಾನಗರ ಪಾಲಿಕೆ ಕಛೇರಿಯಲ್ಲಿ ಕುಟುಂಬ ಸದಸ್ಯರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಕೆಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ಅಧ್ಯಕ್ಷರು ಸಂತೋಷ್ ಡಿಸೋಜಾ, ಕಥೊಲಿಕ್ ಸಭಾ ಮಾಜಿ ಅಧ್ಯಕ್ಷರಾದ ಸ್ಟ್ಯಾನಿ ಲೋಬೊ ಹಾಗೂ ರೋಲ್ಪಿ ಡಿಕೋಸ್ತಾ, ಪಿಯುಸ್ ಮೊಂತೆರೊ, ಲಾರೆನ್ಸ್ ಡಿಸೋಜಾ, ಸತೀಶ್ ಪೆಂಗಲ್, ಪ್ರಾನ್ಸಿಸ್ ಮೊಂತೇರೊ, ಆಲ್ವಿನ್ ರೊಡ್ರಿಗಾಸ್, ಗೊಡ್ವಿನ್ ಪಿಂಟೊ, ಉದಯ್ ಅಚಾರ್, ಚಂದ್ರಹಾಸ್ ಕೋಡಿಕಲ್ ಉಪಸ್ಥಿತರಿದ್ದರು.