ಮಂಗಳೂರು: ರಾಮಕೃಷ್ಣ ಮಿಷನ್ ಮಂಗಳೂರಿನಲ್ಲಿ ೭೫ ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಮಂಗಳೂರು ರಾಮಕೃಷ್ಣ ಮಠದ ಆವರಣದಲ್ಲಿ ನಾಲ್ಕು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನಾಲ್ಕನೇ ದಿನ ನಡೆದ ಸಭಾಕಾರ್ಯಕ್ರಮದಲ್ಲಿರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್‌ಉಪಾಧ್ಯಕ್ಷರಾದ ಶ್ರೀಮತ್ ಸ್ವಾಮಿ ಸುಹಿತಾನಂದಜಿ ಮಹಾರಾಜ್‌ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದಅವರು “ರಾಮಕೃಷ್ಣ ಪರಮಹಂಸರಾಗಲೀ, ಶ್ರೀಮಾತೆ ಶಾರದಾದೇವಿಯವರಾಗಲಿ ಅಥವಾ ಸ್ವಾಮಿ ವಿವೇಕಾನಂದರಾಗಲೀ ಸಮಾಜದಲ್ಲಿ ಕಷ್ಟದಲ್ಲಿರುವ ಅಥವಾ ಬಡತನದಲ್ಲಿರುವವರಿಗೆ ಕರುಣೆ ತೋರಿ ಅವರ ಅಭ್ಯುದಯಕ್ಕಾಗಿ ಕೆಲಸ ಮಾಡಿದವರು ಈ ಚಿಂತನೆಗಳೊಂದಿಗೆ ಒಟ್ಟುಗೂಡಿಇಂದುರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ಕೆಲಸ ಮಾಡುತ್ತಿದೆ. ಹಲವಾರುಜನ ಸನ್ಯಾಸಿಗಳಾಗಿ ಅಥವಾ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾವು ತಾನು, ಮನ ಧನ ಪೂರ್ವಕವಾಗಿಇನ್ನಷ್ಟುಉತ್ತಮರೀತಿಯಲ್ಲಿ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳೋಣ ಈ ಮೂಲಕ ನಮ್ಮಜೀವನವನ್ನು ಪಾವನಗೊಳಿಸಿ ಭಗವಂತನ ಕೃಪೆಗೆ ಪಾತ್ರರಾಗೋಣ”ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ದಕ್ಷಿಣಕನ್ನಡ ಲೋಕಸಭಾಕ್ಷೇತ್ರದ ಸಂಸದರಾದಕ್ಯಾಪ್ಟನ್ ಬ್ರಿಜೇಶ್‌ಚೌಟಅವರು ಮಾತನಾಡಿ “ನಾನು ಇವತ್ತುಏನಾಗಿದ್ದರೂ ಶ್ರೀ ರಾಮಕೃಷ್ಣ ಪರಮಹಂಸರದಯೆಯಿAದ ಹಾಗೂ ಸ್ವಾಮೀಜಿಗಳ ಆಶೀರ್ವಾದದಿಂದ ಎಂದು ಹೇಳಲು ಖುಷಿಯಾಗುತ್ತಿದೆ. ಮಾನ್ಯ ಪ್ರಧಾನಮಂತ್ರಿಗಳ ಸ್ವಚ್ಛ ಭಾರತದಕರೆಗೆ ಕೈ ಜೋಡಿಸಿ ಸಮಾಜವನ್ನು ಒಟ್ಟುಗೂಡಿಸಿ ಮಂಗಳೂರು ಭಾಗದಲ್ಲಿ ಸ್ವಚ್ಛ ಮಂಗಳೂರು ಅಭಿಯಾನವನ್ನು ನಡೆಸಿದ ರೀತಿಎಲ್ಲರಿಗೂ ಮಾದರಿ. ಮಂಗಳೂರು ರಾಮಕೃಷ್ಣ ಮಠದ ಸ್ವಚ್ಛ ಭಾರತಕಾರ್ಯಇನ್ನೂ ಮುಂದುವರಿಯಲಿ. ಮಂಗಳೂರಿನ ಎಲ್ಲ ನಾಗರಿಕರು ಈ ಕಾರ್ಯದಲ್ಲಿಕೈಜೋಡಿಡುತ್ತಾರೆ ಎಂಬ ಭರವಸೆ ನನಗಿದೆ. ಓರ್ವ ಸ್ವಯಂಸೇವಕನಾಗಿ ಹಾಗೂ ಆಶ್ರಮದ ಭಕ್ತನಾಗಿ ನಾನು ಆಶ್ರಮದಜೊತೆಗಿರುತ್ತೇನೆ.” ಎಂದರು. ಭಾರತೀಯ ಸೇನೆಯ ನಿವೃತ್ತಯೋಧರಾದಕ್ಯಾಪ್ಟನ್‌ಗಣೇಶ್‌ಕಾರ್ಣಿಕ್‌ಕಾರ್ಯಕ್ರಮದಲ್ಲಿ ವಿಶೇಷಅಭ್ಯಾಗತರಾಗಿ ಭಾಗವಹಿಸಿದ್ದರು.
ಅಮೃತ ಭವನ ಲೋಕಾರ್ಪಣೆ
ಸುತ್ತಮುತ್ತಲಿನ ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತತರಬೇತಿ ನೀಡುತ್ತಿರುವರಾಮಕೃಷ್ಣ ಮಿಷನ್ ವಿವೇಕಾನಂದತರಬೇತಿಕೇAದ್ರದ ನೂತನತರಗತಿ ಹಾಗೂ ಅಮೃತ ಭವನ ಸಭಾಂಗಣವನ್ನು ಒಳಗೊಂಡ ಕಟ್ಟಡದ ಲೋಕಾರ್ಪಣೆಯನ್ನುರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್‌ಉಪಾಧ್ಯಕ್ಷರಾದ ಶ್ರೀಮತ್ ಸ್ವಾಮಿ ಸುಹಿತಾನಂದಜಿ ಮಹಾರಾಜ್‌ಅವರು ನೆರವೇರಿಸಿದರು.
ಅಮೃತ ವರ್ಷದ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ
ಮಂಗಳೂರು ರಾಮಕೃಷ್ಣ ಮಿಷನ್ ನ ಅಮೃತ ವರ್ಷದ ಹಿನ್ನೆಲೆಯಲ್ಲಿ ವರ್ಷಪೂರ್ತಿ ನಡೆಯುವ ಕಾರ್ಯಕ್ರಮಗಳಿಗೆ ಮೈಸೂರು ಶ್ರೀ ರಾಮಕೃಷ್ಣಆಶ್ರಮದಅಧ್ಯಕ್ಷರು ಹಾಗೂ ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್, ಬೇಲೂರು ಮಠಇದರ ವಿಶ್ವಸ್ಥರಾದ ಸ್ವಾಮಿ ಮುಕ್ತಿದಾನಂದಜಿ ಚಾಲನೆ ನೀಡಿದರು.ರಾಮಕೃಷ್ಣ ಮಿಷನ್ ಮಂಗಳೂರಿನ ಪತ್ರಿಕೆಯನ್ನುಶ್ರೀಮತ್ ಸ್ವಾಮಿ ಸುಹಿತಾನಂದಜಿ ಮಹಾರಾಜ್‌ಅನಾವರಣ ಗೊಳಿಸಿದರು. ಈ ಸಂದರ್ಭದಲ್ಲಿ ಮಂಗಳೂರು ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ನ ನೂತನಜಾಲತಾಣಕ್ಕೆ ಸಂಸದರಾದಕ್ಯಾಪ್ಟನ್ ಬ್ರಿಜೇಶ್‌ಚೌಟ ಅನಾವರಣಗೊಳಿಸಿದರು. ಮಂಗಳೂರು ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ನ ಸಾಕ್ಷ್ಯಚಿತ್ರವನ್ನುಕ್ಯಾಪ್ಟನ್‌ಗಣೇಶ್‌ಕಾರ್ಣಿಕ್ ಬಿಡುಗಡೆಗೊಳಿಸಿದರು.
ಸ್ವಯಂಸೇವಕರಿಗೆಗೌರವಾರ್ಪಣೆ
ಈ ಸಂದರ್ಭದಲ್ಲಿ ಮಿಷನ್‌ಗೆ ಸೇವೆ ಸಲ್ಲಿಸಿದ ೭೫ ಮಂದಿ ಸ್ವಯಂಸೇವಕರಿಗೆ ಹಾಗೂ ಆಶ್ರಮದ ಕಾರ್ಯಕ್ರಮಗಳಲ್ಲಿ ಸಹಕರಿಸಿದ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಭಜನಾ ಮಂಡಳಿಗಳಿಗೆ ಗೌರವ ಸಲ್ಲಿಸಲಾಯಿತು.ಮಂಗಳೂರು ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿಜಿತಕಾಮಾನಂದಜಿ ಸ್ವಾಗತಿಸಿ, ರಾಮಕೃಷ್ಣ ಮಿಷನ್ ಹಿರಿಯ ವಿದ್ಯಾರ್ಥಿ ಹಾಗೂ ಮಂಗಳೂರಿನ ಲೆಕ್ಕ ಪರಿಶೋಧಕಾರದ ಸಿಎ ಶಿವಕುಮಾರ್ ವಂದಿಸಿದರು. ಸ್ಮಿತಾ ಶೆಣೈಕಾರ್ಯಕ್ರಮ ನಿರ್ವಹಿಸಿದರು.
ಸಂತವಾಣಿ
ಮಧ್ಯಾಹ್ನ೨ ಗಂಟೆಗೆ ಪುಣೆಯಖ್ಯಾತ ಶಾಸ್ತ್ರೀಯ ಗಾಯಕ ಶ್ರೀ ಆನಂದ್ ಭಾಟೆಅವರಿಂದ“ಸAತವಾಣಿ” ವಿಶೇಷ ಸಂಗೀತಕಾರ್ಯಕ್ರಮಜರುಗಿತು.

