ಮೂಡುಬಿದಿರೆ : ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ಪೂಪಾಡಿಕಲ್ಲು ಪರಿಸರದಲ್ಲಿ ಗುರುವಾರ ಸಿಡಿಲು ಬಡಿದು ಮೊಬೈಲ್ ಟವರ್ಗೆ ಹಾನಿಯಾಗಿದ್ದು, ನೆಟ್ವರ್ಕ್ ಸಮಸ್ಯೆ ಉಂಟಾಗಿದೆ. ಇದೇ ವೇಳೆ ಪರಿಸರದ ಹಲವು ಮನೆಗಳ ವಿದ್ಯುತ್ ಉಪಕರಣಗಳು ಹಾಳಾಗಿದ್ದು, ಕಡಂದಲೆಯ ತುಳುನಾಡು ವಾರ್ತೆ ಪತ್ರಕರ್ತ ಜಗದೀಶ್ ಪೂಜಾರಿ ಅವರ ಕಾಲಿಗೂ ಗಾಯವಾಗಿರುವುದಾಗಿ ತಿಳಿದುಬಂದಿದೆ.
ಗುರುವಾರ ರಾತ್ರಿ ಕಡಂದಲೆ ಪರಿಸರದಲ್ಲಿ ಸಂಭವಿಸಿದ ಸಿಡಿಲಿನ ಆಘಾತದಿಂದ ಮೊಬೈಲ್ ಟವರ್ಗೆ ಹಾನಿಯಾಗಿದ್ದು, ಮೊಬೈಲ್ ನೆಟ್ವರ್ಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಸ್ಥಳೀಯರು ಮೊಬೈಲ್ ಸಂಪರ್ಕ ಪಡೆಯಲು ತೊಂದರೆ ಅನುಭವಿಸುವಂತಾಗಿದೆ.

