ಕಾರ್ಕಳ : ಹಿರ್ಗಾನದ ನೆಲ್ಲಿಕಟ್ಟೆ ಶ್ರೀ ದತ್ತ ಮಂದಿರದ ಆಶ್ರಯದಲ್ಲಿ 25ನೇ ವರ್ಷದ ತುಳುನಾಡ ಕೃಷಿ ಮೇಳ ಮೇ.10ರಂದು ಆದಿತ್ಯವಾರ ಕೊರಳ ದಿ.ಮಂಜುನಾಥ ಶೆಟ್ಟಿ ವೇದಿಕೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ರವೀಂದ್ರ ಶೆಟ್ಟಿ,ಬಜಗೋಳಿಯವರು ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ಸಾಧಕರಿಗೆ ಪ್ರಶಸ್ತಿ , ನಿವೃತ್ತ ಉದ್ಯೋಗಿಗಳಿಗೆ ಹಾಗೂ ಶಿಕ್ಷಣ ಸಂಸ್ಥೆಯವರಿಗೆ ಗೌರವಗಳು ನಡೆಯಲಿರುವುದು.
ಬೆಳಿಗ್ಗೆ ಗಂಟೆ 11-30ರಿಂದ ಜಾನಪದ ನೃತ್ಯ ಹಾಗೂ ಮಧ್ಯಾಹ್ನ ಗಂಟೆ 12-00ಕ್ಕೆ ಸರಕಾರದಿಂದ ಕೃಷಿಗೆ ಸಿಗುವ ಸವಲತ್ತಿನ ಬಗ್ಗೆ ಗೋಷ್ಠಿ ನಡೆಯಲಿದೆ.
ಮಧ್ಯಾಹ್ನ ಗಂಟೆ 1-20ರಿಂದ ಹಳ್ಳಿಯ ಊಟೋಪಚಾರ , ಮಧ್ಯಾಹ್ನ ಗಂಟೆ 2.00ರಿಂದ ನೃತ್ಯ ಹಾಗೂ ಗಂಟೆ 2.30ರಿಂದ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವುದು ಹೇಗೆ ? ಎಂಬುದರ ಕುರಿತು ಚರ್ಚಾ ಗೋಷ್ಠಿ ಹಾಗೂ ಸಂಜೆ 4-00ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.
ಸಂಜೆ ಗಂಟೆ 6-00ರಿಂದ ಶ್ರೀ ದತ್ತ ಯಕ್ಷಗಾನ ಕಲಾ ಮಂಡಳಿ, ಶ್ರೀ ದತ್ತ ಮಂದಿರ ನೆಲ್ಲಿಕಟ್ಟೆ ಇವರಿಂದ “ಯಜ್ಞ ಸಂರಕ್ಷಣೆ” ಎಂಬ ಯಕ್ಷಗಾನ ಪ್ರಸಂಗ , ಸಂಜೆ ಗಂಟೆ 7-00ರಿಂದ ಅನ್ನಸಂತರ್ಪಣೆ, ಹಾಗೂ ರಾತ್ರಿ 8-30ರಿಂದ ಓಂಕಾರ ಎಂಬ ತುಳು ನಾಟಕ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ನೆಲ್ಲಿಕಟ್ಟೆ ಶ್ರೀ ದತ್ತ ಮಂದಿರದ ಅಧ್ಯಕ್ಷರು ಮತ್ತು ಸರ್ವಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

