ಮೂಲತಹ ತಮಿಳುನಾಡಿನ ತಂಜಾವೂರಿನ ಭರತನಾಟ್ಯ ವನ್ನು 1935ರಲ್ಲಿ ದಿವಂಗತ ಯುಎಸ್ ಕೃಷ್ಣರಾವ್ ಕರ್ನಾಟಕದಲ್ಲಿ ಪುನಶ್ಚೇತನ ಗೊಳಿಸಿದರು. ಅವರ ಮಗ ಯು ಕೆ ಪ್ರವೀಣ್ ತದ್ವಿ ನೃತ್ಯ ವಿದ್ಯಾನಿಲಯದಲ್ಲಿ ಕು.ರಾಶಿ ಹೆಗ್ಡೆ ಅವರಿಗೆ ಭರತನಾಟ್ಯವನ್ನು ಸುಮಾರು 13 ವರ್ಷಗಳ ಕಾಲ ಕಲಿಸಿದರು.

ಇದೀಗ ಕು.ರಾಶಿ ಹೆಗ್ಡೆ ಮೇ 17ರಂದು ರವಿವಾರ ಸಂಜೆ 4:30ಕ್ಕೆ, ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಭರತನಾಟ್ಯ ರಂಗ ಪ್ರವೇಶವನ್ನು ನೀಡಲಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಪಂದನಲ್ಲೂರು ಪದ್ಧತಿಯಲ್ಲಿ ಪ್ರದರ್ಶನವನ್ನು ನೀಡದಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿಧ ಮಹನೀಯರು ಭಾಗವಹಿಸಲಿದ್ದು ಹಲವಾರು ವಿದ್ವಾಂಸರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಕು.ರಾಶಿ ಹೆಗ್ಡೆ ಹಿರಿಯ ದರ್ಜೆ ಭರತನಾಟ್ಯ, ಕಿರಿಯ ದರ್ಜೆ ಸಂಗೀತ ಪರೀಕ್ಷೆ ಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಚಿತ್ರಕಲೆಯಲ್ಲಿಯೂ ಪರಿಣತಿಯನ್ನು ಹೊಂದಿರುತ್ತಾಳೆ. ಈಗಾಗಲೇ ತಂಡದೊಂದಿಗೆ ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ ಈಕೆ ಪ್ರಸ್ತುತ ಎಬಿ ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ನೇರಳಕಟ್ಟೆಯಲ್ಲಿ ತೃತೀಯ ವರ್ಷದ ದಂತ ವೈದ್ಯಕೀಯ ಅಭ್ಯಾಸವನ್ನು ಮುಂದುವರಿಸುತ್ತಿದ್ದಾಳೆ. ಈಕೆ ಮೊಗರು ಗುತ್ತು ರಾಜೇಶ್ ಕುಮಾರ್ ಹೆಗ್ಡೆ ಹಾಗೂ ಮೂಡಂಬೈಲು ಶುಭ ಇವರ ಪುತ್ರಿ.
ಪತ್ರಿಕಾಗೋಷ್ಠಿಯಲ್ಲಿ ವಿದ್ವಾನ್ ಯುಕೆ ಪ್ರವೀಣ್, ಸಂಗೀತ ವಿದ್ವಾನ್ ಉಷಾ, ರಾಜೇಶ್ ಕುಮಾರ್ ಹೆಗ್ಡೆ, ಕು. ರಾಶಿ ಹೆಗ್ಡೆ ಹಾಜರಿದ್ದರು.
ವರದಿ ರಾಯಿ ರಾಜ ಕುಮಾರ

