ಮಂಗಳೂರಿನಲ್ಲಿ ದಾಖಲಾತಿ ಅಂದೋಲನ

0
51

ಸರಕಾರಿ ಮತ್ತು ಪಿಎಂ ಶ್ರೀ ಶಾಲೆಗಳಲ್ಲಿ 2026-27 ನೇ ಸಾಲಿನಲ್ಲಿ ದಾಖಲಾತಿ ಹೆಚ್ಚಿಸುವ ಉದ್ದೇಶದಿಂದ ಮಂಗಳೂರು ಉತ್ತರ ಮತ್ತು ದಕ್ಷಿಣ ವಲಯಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಂಪನ್ಮೂಲ ಕೇಂದ್ರದ ಸಹಭಾಗಿತ್ವದಲ್ಲಿ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಇಓ ರವರುಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಆಂದೋಲನದ ಅಂಗವಾಗಿ ಶಾಲಾ ದಾಖಲಾತಿ ಗಾಗಿ ಮೇ 13ರಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಮಕ್ಕಳನ್ನು ಹತ್ತಿರದ ಸರಕಾರಿ ಶಾಲೆಗೆ ದಾಖಲಿಸುವ, ಹೊರಗುಳಿದ ಮಕ್ಕಳು ಹಾಗೂ ಒಂದರಿಂದ ಐದನೇ ತರಗತಿವರೆಗಿನ ದಾಖಲಾತಿಗೆ ವಿಶೇಷ ಒತ್ತು ನೀಡಲಾಗಿದೆ.

ಮೇ 15ರಂದು ತಾಲೂಕಿನಲ್ಲಿ ಬೆಳಗ್ಗಿನಿಂದ ಬೈಕಂಪಾಡಿ ಮೀನಾ ಕಳೆಯ ಸರಕಾರಿ ಪ್ರೌಢಶಾಲೆ ಹಾಗೂ ಮಧ್ಯಾಹ್ನ ಸದಾಶಿವನಗರ ಪಿಎಂ ಶ್ರೀ ಶಾಲೆಗಳಲ್ಲಿ ದಾಖಲಾತಿ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಎಲ್ಲರಿಗೂ ತಿಳಿದಿರುವಂತೆ ಸಹಕಾರಿ ಶಾಲೆಗಳಲ್ಲಿ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಗುಣಮಟ್ಟದ ಶಿಕ್ಷಣ, ದ್ವಿ ಭಾಷಾ ಬೋಧನೆ ಹಾಗೂ ವಿವಿಧ ಯೋಜನೆಗಳ ಕುರಿತು ಜನಜಾಗೃತಿ ಮೂಡಿಸಲಾಗುತ್ತದೆ.

ಮೇ 18ರಂದು ವಲಯದ ಮಂಗಳೂರು, ಸುರತ್ಕಲ್, ಮತ್ತು ಮುಲ್ಕಿ ಕೇಂದ್ರಗಳಲ್ಲಿ ದಾಖಲಾತಿ ಅಭಿಯಾನವನ್ನು ಆಯುಧ ಒಂದು ಶಾಲೆಯಲ್ಲಿ ಹಮ್ಮಿಕೊಳ್ಳಲಾಗುತ್ತದೆ ಎಲ್ಲಾ ಕಾರ್ಯಕ್ರಮಗಳಲ್ಲಿ ಶಿಕ್ಷಕರು, ಎಸ್ ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರುಗಳು, ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ದಾಖಲಾತಿ ಹೆಚ್ಚಿಸಲು ಸಹಕರಿಸುವಂತೆ ಮನವಿ ಮಾಡಿರುತ್ತಾರೆ.

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಉತ್ತರ ಬಿಇಓ ಜೇಮ್ಸ್ ಕುಟಿನ್ಹ, ದಕ್ಷಿಣ ಎಚ್ ಆರ್ ಈಶ್ವರ್, ಸಮನ್ವಯಾಧಿಕಾರಿಗಳಾದ ವೇದಾವತಿ, ವಿದ್ಯಾ ಶೆಟ್ಟಿ, ಸುಷ್ಮಾ ಕಿಣಿ, ತಹಸೀನ್, ನಾಗರಾಜ ಎಂ ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ
.

LEAVE A REPLY

Please enter your comment!
Please enter your name here