ಮುಲ್ಕಿ: ಮರ ಬಿದ್ದು ರಾಜ್ಯ ಹೆದ್ದಾರಿ ಸಂಚಾರ ಅಸ್ತವ್ಯಸ್ತ

0
63

ಮುಲ್ಕಿ: ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕುಬೆವೂರು ರೈಲ್ವೇ ಮೇಲ್ಸೇತುವೆ ಬಳಿ ಭಾರೀ ಗಾತ್ರದ ಮರ ಹೆದ್ದಾರಿಗೆ ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ
ಸಂಜೆ ಬೀಸಿದ ಭಾರೀ ಗಾಳಿಗೆ ಏಕಾಏಕಿ ಮರ ಹೆದ್ದಾರಿಗೆ ಬಿದ್ದಿದೆ.
ಈ ಸಂದರ್ಭ ಸ್ಥಳೀಯರಾದ ರಂಜನ್ ಬಿ. ಶೆಟ್ಟಿ ಕಿಲ್ಪಾಡಿ ಭಂಡಸಾಲೆ , ರಫೀಕ್ ಮುಲ್ಕಿ, ಹರೀಶ್ ಕೋಟ್ಯಾನ್ ಕಿಲ್ಪಾಡಿ, ಪ್ರವೀಣ್ ಕುಬೆವೂರು, ಸ್ವಸ್ತಿಕ್ ಆರ್ ಶೆಟ್ಟಿ, ಯತೀಶ್ ಕೊಲಕಾಡಿ, ತಾರಾನಾಥ ಅಂಗರಗುಡ್ಡೆ ಮತ್ತಿತರರು ಸೇರಿಕೊಂಡು ಕಿಲ್ಪಾಡಿ ಪಂಚಾಯತ್ ಸಹಕಾರದೊಂದಿಗೆ ಮರವನ್ನು ತೆರವುಗೊಳಿಸಲಾಯಿತು.
ಈ ಭಾಗದಲ್ಲಿ ಅನೇಕ ಮರಗಳು ಬೀಳುವ ಸ್ಥಿತಿಯಲ್ಲಿದ್ದು, ಅರಣ್ಯ ಇಲಾಖೆ ಕಾರ್ಯಪ್ರವೃತ್ತರಾಗಿ ತೆರವುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here