ಲಯನ್ಸ್ ಕ್ಲಬ್ ಬೆಳ್ಮಣಿನಿಂದ ಮೂಳೂರು ನಲ್ಲಿ ವಿಶ್ವಶಾಂತಿ ಚಿತ್ರ ಸ್ಪರ್ಧೆ

0
8

ಕಾರ್ಕಳ : ಲಯನ್ಸ್ ಕ್ಲಬ್ ಬೆಳ್ಮಣ್ ವತಿಯಿಂದ ಅಲ್ ಇನ್ ಸಾನ್ ಹಿರಿಯ ಪ್ರಾಥಮಿಕ ಶಾಲೆ ಮೂಳೂರಿನ ವಿದ್ಯಾರ್ಥಿಗಳಿಗಾಗಿ ಮಾನವೀಯತೆಯಲ್ಲಿ ಸಾಮರಸ್ಯ ಎಂಬ ವಿಷಯದ ಕುರಿತು ಜಾಗತಿಕ ಶಾಂತಿ ಚಿತ್ರ ಸ್ಪರ್ಧೆಯನ್ನು ಸಂಘಟಿಸಲಾಯಿತು. ಕ್ಲಬ್ಬಿನ ಕಾರ್ಯದರ್ಶಿ ಲಯನ್ ಟೀನಾ ಡೆಸಾರವರು ಸ್ಪರ್ಧೆಯ ಉದ್ದೇಶ, ಮಕ್ಕಳ ಭವಿಷ್ಯ, ಶಾಂತಿ ಸೌಹಾರ್ದತೆಯ ಮಹತ್ವ ಮತ್ತು ಸ್ಪರ್ಧೆಯ ನಿಯಮಗಳನ್ನು ವಿವರಿಸಿದರು.

ಆ ಸಂಧರ್ಭದಲ್ಲಿ ಜಿಲ್ಲಾ ಸಂಯೋಜಕರಾದ ಲಯನ್ ರಮಾ ಬೋಳಾರ್, ಕ್ಲಬ್ಬಿನ ಅಧ್ಯಕ್ಷರಾದ ಲಯನ್ ಬಿ ಎಚ್ ಶಿವರಾಮ ಆಚಾರ್ಯ, ಲಯನ್ ಜ್ಯೋತಿ ಆಚಾರ್ಯ, ಶಾಲಾ ಶಿಕ್ಷಕ ವೃಂದದವರು ಹಾಜರಿದ್ದರು. ಕ್ಲಬ್ಬಿನ ಕಾರ್ಯದರ್ಶಿ ಲಯನ್ ಟೀನಾ ಡೆಸಾರವರು ಕಾರ್ಯಕ್ರಮವನ್ನು ನಿರ್ವಹಿಸಿದರು.