ಮುಲ್ಕಿ : ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀಕ್ಷೇತ್ರದಲ್ಲಿ ಯಶಸ್ವಿಯಾಗಿ ನಡೆದ “ಅಪ್ಪೆ ಬೇರ್‌ದ ತುಳುನಾಡ್-ರಾಷ್ಟ್ರೀಯ ತುಳು ವಿಚಾರಗೋಷ್ಠಿ” ಕಾರ್ಯಕ್ರಮದ ಯಶಸ್ವಿಗೆ ಕಾರಣಕರ್ತರಾದಕಾರ್ಯಕರ್ತರು ಹಾಗೂ ಸಂಘಟಕರಿಗೆ ಅಭಿನಂದನೆ ಸಲ್ಲಿಸುವ ಸಮಾರಂಭವು ಮುಲ್ಕಿ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿಡಾ. ಹರಿಶ್ಚಂದ್ರ ಸಾಲ್ಯಾನ್ ಅವರು, “ಅಪ್ಪೆ ಬೇರ್‌ದ ತುಳುನಾಡ್ ಕಾರ್ಯಕ್ರಮದ ಯಶಸ್ಸು ಮುಲ್ಕಿಯಗಡಿಯನ್ನು ದಾಟಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪಂದನೆ ಪಡೆಯುವಂತಾಗಿದೆ. ಇದು ಕೇವಲ ಒಂದುಕಾರ್ಯಕ್ರಮದ ಯಶಸ್ಸಲ್ಲ, ತುಳುನಾಡಿನ ಮಾತೃಮೂಲ ಸಂಸ್ಕೃತಿ, ಜೀವನಮೌಲ್ಯಗಳು ಹಾಗೂ ಪರಂಪರೆಯ ಪುನರ್ಜಾಗೃತಿಯ ಸಂಕೇತವಾಗಿದೆ” ಎಂದರು.

ಮುಂದುವರಿದು ಮಾತನಾಡಿದ ಅವರು “ನಾವೆಲ್ಲರೂ ಮತ್ತಷ್ಟು ಜಾಗೃತರಾಗಿ ತುಳುನಾಡಿನ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಉಳಿಸಬೇಕಾಗಿದೆ.ಮಾತೃಮೂಲ ಪದ್ಧತಿಯ ಮೌಲ್ಯಗಳನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಪೂರ್ವಜರು ಕಟ್ಟಿಕೊಟ್ಟ ಪ್ರಾಚೀನ ಕುಟುಂಬ ವ್ಯವಸ್ಥೆ, ಸಾಮಾಜಿಕ ಸಂಬಂಧಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವುದು ಯುವ ಪೀಳಿಗೆಯ ಜವಾಬ್ದಾರಿಯಾಗಿದೆ” ಎಂದುಅಭಿಪ್ರಾಯಪಟ್ಟರು.
ತುಳುವರ್ಲ್ಡ್ಇಂಟರ್ನ್ಯಾಷನಲ್ ಸ್ಥಾಪಕ ಡಾ. ರಾಜೇಶ್ ಆಳ್ವ ಮಾತನಾಡಿ ಕಾರ್ಯಕ್ರಮವು ತುಳುನಾಡಿನ ಮಾತೃಮೂಲ ಸಂಸ್ಕೃತಿಯಕುರಿತಾಗಿಜನರಲ್ಲಿ ಹೊಸ ಚಿಂತನೆ ಮತ್ತುಜಾಗೃತಿಯನ್ನು ಮೂಡಿಸಿದೆ ಹಾಗೂ ಕಾರ್ಯಕ್ರಮ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದ ಅಪ್ಪೆಬೇರು ತುಳುನಾಡಿನ ಭಾನುಮತಿ ಶೆಟ್ಟಿಯವರುಧನ್ಯವಾದ ಅರ್ಪಿಸಿದರು.

