ಪ್ರೀತಿ ವಿವಾದಕ್ಕೆ ಕೊಲೆ ಯತ್ನ : ಆರೋಪಿ ಬಂಧನ

0
143

ಪಡುಬಿದ್ರಿ : ನಿನ್ನ ಹೆಂಡ್ತಿಯನ್ನು ನಾ ಪ್ರೀತಿಸುವೆ. ನೀನು ಆಕೆಯನ್ನು ಬಿಟ್ಟು ಬಿಡು. ಇಲ್ಲದಿದ್ದಲ್ಲಿ ಜೀವ ಸಹಿತ ಬಿಡಲಾರೆ ಎಂದ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್‌ವೊಬ್ಬ ಇನ್ನ ಗ್ರಾಮದ ಆಶಾ ಶೆಟ್ಟಿ ಎಂಬವರ ಬಾಡಿಗೆ ಮನೆಯಲ್ಲಿ ತನ್ನ ಪತ್ನಿ ನಿಶಾ ಮಿಶ್ರಾ ಹಾಗೂ ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದ ರಾಕೇಶ್‌ ಮಿಶ್ರಾ (39) ಎಂಬವರಿಗೆ ಸಿಕ್ಕ ಸಿಕ್ಕಲ್ಲಿ ಚೂರಿಯಿಂದ ಇರಿದು ಘಾಸಿಗೊಳಿಸಿ ಅವರ ಕೊಲೆಗೆ ಯತ್ನ ನಡೆಸಿರುವ ಘಟನೆ ಪಡುಬಿದ್ರಿ ಪೊಲೀಸ್‌ ಠಾಣೆಯಿಂದ ವರದಿಯಾಗಿದೆ.

ಪ್ರಕರಣ ದಾಖಲಿಸಿಕೊಂಡ ಪಡುಬಿದ್ರಿ ಪೊಲೀಸರು ತನಿಖೆ ಆರಂಭಿಸಿ ಘಟನೆ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಆರೋಪಿ ಮಂಜರಪಲ್ಕೆ ನಿವಾಸಿ ಮೋಹನಚಂದ್ರ (26) ಎಂಬಾತನನ್ನು ಹೆಡೆಮುರಿಕಟ್ಟಿ ವಶಕ್ಕೆ ಪಡೆದಿದ್ದು, ಆರೋಪಿಯ ಬಂಧನ ಪ್ರಕ್ರಿಯೆಗಳನ್ನು ಮುಗಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

LEAVE A REPLY

Please enter your comment!
Please enter your name here