ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ವತಿಯಿಂದ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ನೇತೃತ್ವದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ನಂದಳಿಕೆ ಗ್ರಾಮದ ಅಬ್ಬನಡ್ಕ ನಿವಾಸಿ ಆಶಾ ಪೂವಪ್ಪ ಅವರ ಮನೆ ನಿರ್ಮಾಣಕ್ಕೆ ಸಹಾಯಧನ ಹಸ್ತಾಂತರಿಸಲಾಯಿತು.
ಆರ್ಥಿಕವಾಗಿ ಬಹಳಷ್ಟು ಸಂಕಷ್ಟದ ಒಂದೆಡೆಯಾದರೇ ಕಳೆದ ೧೫ ವರ್ಷಗಳ ಹಿಂದೆ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದ ಮನೆಯ ಯಜಮಾನನ ದು:ಖ ಮತ್ತೊಂದೆಡೆ ಇದರೊಂದಿಗೆ ನೆಮ್ಮದಿಯ ವಾಸಕ್ಕೊಂದು ಮನೆ ನಿರ್ಮಿಸಿಬೇಕೆಂಬ ಹಲವಾರು ವರ್ಷಗಳ ಕನಸನೊತ್ತ ನಂದಳಿಕೆ ಗ್ರಾಮದ ಅಬ್ಬನಡ್ಕ ನಿವಾಸಿ ಆಶಾ ಪೂವಪ್ಪ ಅವರ ಕುಟುಂಬ ಇತ್ತೀಚೆಗೆ ವಾಹನ ಅಪಘಾತವಾಗಿ ಕಾಲಿಗೆ ಬಲವಾದ ಪೆಟ್ಟು ಬಿದ್ದು ಅಪರೇಷನ್ ಆಗಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಮಗನ ಪರಿಸ್ಥಿತಿ ಇನ್ನೊಂದೆಡೆ ಆಶಾ ಅವರ ಮೂವರು ಹೆಣ್ಣು ಮಕ್ಕಳು ಉದ್ಯೋಗಕ್ಕೆ ಸೇರಿ ಇದೀಗ ನೂತನ ಮನೆ ನಿರ್ಮಿಸುವ ಶ್ರಮದಲ್ಲಿರುವ ಇವರ ಕಷ್ಟದ ಪರಿಸ್ಥಿತಿಯನ್ನು ಪರಿಗಣಿಸಿ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ವತಿಯಿಂದ ನೂತನ ಮನೆ ನಿರ್ಮಾಣಕ್ಕೆ ರೂ. ೨೦,೦೦೦/- ಸಹಾಯಧನ ಮೊತ್ತವನ್ನು ಆಶಾ ಪೂವಪ್ಪ ಅವರ ಮಗಳಾದ ಆರತಿ ಕುಮಾರಿಯವರಲ್ಲಿ ಸಂಘದ ಅಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿ ಅವರು ಸಹಾಯಧನದ ಚೆಕ್ ಅನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಪೂರ್ವಾಧ್ಯಕ್ಷ ರಘುವೀರ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಪೂಜಾರಿ, ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಲೀಲಾ ಪೂಜಾರಿ, ಸದಸ್ಯರಾದ ವೀಣಾ ಪೂಜಾರಿ, ಪದ್ಮಶ್ರೀ ಪೂಜಾರಿ, ಪುಪ್ಪ ಕುಲಾಲ್, ಸುರೇಶ್ ಅಬ್ಬನಡ್ಕ, ಸುದರ್ಶನ್ ಕುಂದರ್, ಶಾಂತರಾಮ್ ಕುಲಾಲ್, ಪ್ರದೀಪ್ ಸುವರ್ಣ ಮೊದಲಾದವರಿದ್ದರು.
ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಮನೆ ನಿರ್ಮಾಣಕ್ಕೆ ಸಹಾಯಧನ ಹಸ್ತಾಂತರ
RELATED ARTICLES