ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಥೈಲ್ಯಾಂಡ್ ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ಅವರು “ದಿ ವರ್ಲ್ಡ್ ಟಿಪಿಟಕ: ಸಜ್ಜಯ ಫೋನೆಟಿಕ್ ಎಡಿಷನ್”ವನ್ನು ಉಡುಗೊರೆಯಾಗಿ ನೀಡಿದರು. ಟಿಪಿಟಕ (ಪಾಲಿ ಭಾಷೆ) ಅಥವಾ ತ್ರಿಪಿಟಕ (ಸಂಸ್ಕೃತ ಭಾಷೆ) ಭಗವಾನ್ ಬುದ್ಧನ ಬೋಧನೆಗಳ ಸಂಕಲನವಾಗಿದ್ದು, ಇದು 108 ಸಂಪುಟಗಳನ್ನು ಒಳಗೊಂಡಿದೆ. ಇದನ್ನು ಪ್ರಮುಖ ಬೌದ್ಧ ಧರ್ಮಗ್ರಂಥವೆಂದು ಪರಿಗಣಿಸಲಾಗಿದೆ. ಪ್ರಧಾನಿ ಮೋದಿ ಅವರಿಗೆ ನೀಡಲಾದ ಈ ಗ್ರಂಥ ಪಾಲಿ ಮತ್ತು ಥಾಯ್ ಲಿಪಿಗಳಲ್ಲಿ ಬರೆಯಲಾದ ಸೂಕ್ಷ್ಮವಾಗಿ ರಚಿಸಲಾದ ಆವೃತ್ತಿಯಾಗಿದೆ. ಈ ವಿಶೇಷ ಆವೃತ್ತಿಯನ್ನು 2016ರಲ್ಲಿ ಥೈಲ್ಯಾಂಡ್ ಸರ್ಕಾರವು ರಾಜ ಭೂಮಿಬೋಲ್ ಅಡುಲ್ಯದೇಜ್ (ರಾಮ IX) ಮತ್ತು ರಾಣಿ ಸಿರಿಕಿತ್ ಅವರ 70 ವರ್ಷಗಳ ಆಳ್ವಿಕೆಯ ಸ್ಮರಣಾರ್ಥವಾಗಿ ವಿಶ್ವ ಟಿಪಿಟಕ ಯೋಜನೆಯ ಭಾಗವಾಗಿ ಪ್ರಕಟಿಸಿತು.
ಪ್ರಧಾನಿ ಮೋದಿ ಅವರಿಗೆ ಟಿಪಿಟಕವನ್ನು ನೀಡಿದ್ದು ಭಾರತದ ಆಧ್ಯಾತ್ಮಿಕ ನಾಯಕತ್ವ ಮತ್ತು ಬೌದ್ಧ ರಾಷ್ಟ್ರಗಳೊಂದಿಗಿನ ಅದರ ಶಾಶ್ವತ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಪ್ರಧಾನಿ ಮೋದಿ ಅವರಿಗೆ ಟಿಪಿಟಕವನ್ನು ನೀಡುವುದು ಭಾರತದ ಆಧ್ಯಾತ್ಮಿಕ ನಾಯಕತ್ವ ಮತ್ತು ಬೌದ್ಧ ರಾಷ್ಟ್ರಗಳೊಂದಿಗಿನ ಅದರ ಶಾಶ್ವತ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.