ಬಿ.ಜೆ.ಎಂ ಮಜೂರ್ ಮಸ್ಜಿದ್ನಲ್ಲಿ ಪಳ್ಳಿ ದರ್ಸ್ ಪ್ರಾರಂಭ

0
103

ಪಳ್ಳಿ ದರ್ಸ್ ಊರಿನ ಬೆಳಕು. ದರ್ಸ್ ಎಂಬುದು ಇಸ್ಲಾಂ ನ ಪ್ರಾಚೀನ ಕಾಲದಿಂದಲೂ ಬಂದಂತಹ ಬಹಳ ದೊಡ್ಡದಾದ ಒಂದು ಬೆಳಕಾಗಿದೆ. ಅದು ಮಸೀದಿಯಲ್ಲಿ ಪ್ರಾರಂಭವಾದರೆ ಆ ಊರಿಗೊಂದು ಬೆಳಕು ಇದ್ದಂತೆ. ಇದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಕುಂಬ್ರಾ ಮರ್ಕಝುಲ್ ಹುದಾ ಇದರ
ಪ್ರಾಂಶುಪಾಲ ರಾದ ಯು.ಕೆ. ಮುಹಮ್ಮದ್ ಸಅದಿ ಹೇಳಿದರು.

ಬದ್ರಿಯ ಜುಮಾ ಮಸೀದಿ ಮಲ್ಲಾರು – ಮಜೂರು ನಲ್ಲಿ “ಪಳ್ಳಿ ದರ್ಸ್ ಉದ್ಘಾಟಿಸಿ ಮಾತನಾಡಿದರು. ದುಆ ಆಶೀರ್ವಚನ ನೀಡಿದ ಸಯ್ಯಿದ್ ಮುಹಮ್ಮದ್ ಮೌಲ ಜಮಲುಲ್ಲೈಲಿ ತಂಙಳ್ ಅವರು ದರ್ಸಿನ ಮಹಿಮೆಯನ್ನು ವಿವರಿಸುತ್ತಾ ಬಹಳ ಉತ್ತಮವಾದಂತಹ ಒಂದು ಜ್ಞಾನ ಕೇಂದ್ರ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಮಾತ್ ಅಧ್ಯಕ್ಷರಾದ ಡಾ.ಎಂ. ಫಾರೂಕ್ ಚಂದ್ರನಗರ ರವರು ಇಂತಹ ಒಂದು ದರ್ಸ್ ನಮ್ಮ ಊರಿನ ಕನಸಾಗಿತ್ತು. ಇದು ಇಂದು ನೆರವೇರುತ್ತದೆ ಬಹಳ ಸಂತಸ ತಂದಿದೆ. ಈ ಊರಿನವರಿಗೆ ನಾವು ಆಭಾರಿಯಾಗಿದ್ದೇವೆ.

ಇದಕ್ಕಾಗಿ ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕವಾದಂತಹ ಅಭಿನಂದನೆಗಳನ್ನ ನಾನು ಹೇಳುತ್ತಿದ್ದೇನೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು. ಸ್ಥಳೀಯ ಖತೀಬ್ ಅಬ್ದುರ್ರಶೀದ್ ಸಖಾಫಿ ಅಲ್ ಕಾಮಿಲ್ ಹಾಗೂ ಮುದರ್ರಿಸ್ ಸಯ್ಯಿದ್ ಮುಹಮ್ಮದ್ ಶಹೀರ್ ಅಲ್ ಹಿಕಮೀ, ಅಲ್ ಹಿಷಾಮೀ ರವರು ಭಾಷಣ ಮಾಡಿದರು.

ಸದ್ರ್ ಉಸ್ತಾದ್ ಅಬೂಬಕರ್ ಸಿದ್ದೀಕ್ ಸಅದಿ, ತಾಜುದ್ದೀನ್ ಸಖಾಫಿ, ಅಶ್ರಫ್ ಮದನಿ, ತೌಸೀಫ್ ಹನೀಫೀ, ಅಬ್ದುರಹ್ಮನ್ ಸಹದಿ, ಹಾಗೂ ಆಡಳಿತ ಸಮಿತಿಯ ಪ್ರ ಕಾರ್ಯದರ್ಶಿ ಅಶ್ರಫ್ ಮೂಸ, ಉಪಾಧ್ಯಕ್ಷರಾದ ಹಸನಬ್ಬ ಮಜೂರು,ಕಾರ್ಯದರ್ಶಿಗಳಾದ ಅಶ್ರಫ್ ಕರಂದಾಡಿ,ರಜಬ್ ಕರಂದಾಡಿ ಕೋಶಾಧಿಕಾರಿ ಪಿ.ಎಂ ಇಬ್ರಾಹಿಂ ಪಾದೂರು ಹಾಗೂ ಜಮಾತ್ ಕಮಿಟಿ ಸದಸ್ಯರುಗಳು ಜಮಾತ್ ಬಾಂದವರು ಉಪಸ್ಥಿತರಿದ್ದರು.