ವಿಶೇಷ ಚೇತನ ಮಕ್ಕಳಿಗಾಗಿ ಹೆತ್ತವರು ಸ್ವಕಾರ್ಯವನ್ನು ಬದಿಗಿಟ್ಟು ಸ್ಪಂದಿಸುವರು-ರವಿಶಂಕರ್ ರಾವ್

0
13

ಮೂಡುಬಿದಿರೆಯ ಶಿಕ್ಷಕರು, ಇತರ ಅಧಿಕಾರಿಗಳು ಅಪ್ಯಾಯಮಾನವಾದ ಪ್ರೀತಿ ತೋರಿ, ಸದಾ ನೆನಪಿನಲ್ಲಿ ಇಡಬಹುದಾದ ಸುಂದರವಾದ ಸಂಗತಿಗಳನ್ನು ನನ್ನ ಬದುಕಿನಲ್ಲಿ ಬಿತ್ತಿರುತ್ತಾರೆ. ಇಲ್ಲಿ ನಾನು ಪ್ರಾರಂಭ ಮಾಡಿದ ವಿಶೇಷ ಚೇತನ ಮಕ್ಕಳ ಕ್ರೀಡೆ ಎಲ್ಲರಿಗೂ ಮಾದರಿಯಾಗುವಂತೆ ಮೂಡಿಬಂದದು ಹಾಗೂ ಆ ಮಕ್ಕಳಿಗಾಗಿ ಸ್ವಕಾರ್ಯವನ್ನು ಬದಿಗಿಟ್ಟು ಸ್ಪಂದಿಸಿದ ಹೆತ್ತವರನ್ನು ನಾನು ಸದಾ ಸ್ಮರಿಸಿಕೊಳ್ಳುತ್ತೇನೆ ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ರವಿಶಂಕರ್ ರಾವ್ ಜುಲೈ 18ರಂದು ನುಡಿದರು.

ಅವರು ಮೂಡುಬಿದಿರೆ ನಿವೃತ್ತ ಸರಕಾರಿ ನೌಕರರ ಸಂಘದ ಮುಖ್ಯ ಅತಿಥಿಯಾಗಿ ಮಾತನಾಡಿದರು. ತೀವ್ರವಾಗಿ ಬೆಳೆಯುತ್ತಿರುವ ಮೂಡುಬಿದಿರೆ ನನಗೆ ಖುಷಿ ನೀಡಿದ ಸ್ಥಳವಾಗಿದೆ. ಅಧಿಕಾರ ಇರುವಾಗ ಸಿಹಿ ಕಹಿ ಭಾವನೆಗಳು ಸಾಮಾನ್ಯ. ಆದರೆ ನಾವು ಬೇರೆಯವರಿಗೆ ಮಾದರಿಯಾಗುವಂತೆ ನಮ್ಮ ನಡವಳಿಕೆಗಳನ್ನು ಇಟ್ಟುಕೊಂಡಾಗ ಸುಂದರ ಬದುಕು ನಮ್ಮದಾಗಲು ಸಾಧ್ಯವಿದೆ. ಪ್ರತಿ ತಿಂಗಳು ಮೊದಲ ದಿನವೇ ಸಂಬಳ ಆಗುವಂತೆ ಮಾಡಿದ್ದನ್ನು ಶಿಕ್ಷಕರು ಇಂದಿಗೂ ಸ್ಮರಿಸಿಕೊಳ್ಳುತ್ತಿದ್ದಾರೆ. ನ್ಯಾಯಯುತ ರೀತಿಯಲ್ಲಿ ಬದುಕುವುದು ಕಷ್ಟ ಸಾಧ್ಯವಾದರೂ ಅತಿ ನೆನಪಿನಲ್ಲಿ ಉಳಿಯಬಹುದಾದ ಸಂಗತಿಗಳನ್ನು ನೀಡುತ್ತದೆ ಎಂದು ನೆನಪಿನ ಬುತ್ತಿಯನ್ನು ಸಭೆ ಎದುರು ತೆರೆದಿಟ್ಟರು.
ಪ್ರೇಮ ಸಿ ರಾವ್ ಅಧ್ಯಕ್ಷ ಪೀಠದಿಂದ ಮಾತನಾಡಿದರು. ಉಪಾಧ್ಯಕ್ಷ ರವೀಶ್ ಸ್ವಾಗತಿಸಿದರು ವೇದಿಕೆಯಲ್ಲಿ ಟಿಎಂಕೆಂಬಾರೆ, ಅನಂತಪದ್ಮನಾಭ ಹೊಳ್ಳ ಹಾಜರಿದ್ದರು. ಕಾರ್ಯದರ್ಶಿ ಪದ್ಮನಾಭ ರೈ ವರದಿ ವಾಚಿಸಿದರು. ಟಿ ಎಂ ಪಾಂಗಣ್ಣಾಯ ವಂದಿಸಿದರು.