ಸಜೀಪದಲ್ಲಿ ಶಾರದಾ ಪೂಜೆಯ ಶತಮಾನೋತ್ಸವಕ್ಕೆ ಸಿದ್ಧತೆ

0
18

ಶ್ರೀ ಶಾರದ ಪೂಜಾ ಮಹೋತ್ಸವ ಸಮಿತಿ ಸುಭಾಷ್ ಯುವಕ ಮಂಡಲ ರಿ ಸಂಯುಕ್ತ ಆಶ್ರಯದಲ್ಲಿ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ 17/10/26 ರಿಂದ 22/10/2026 ತನಕ ಆರು ದಿನಗಳ ಪರ್ಯಂತ ಸ ಜೀಪದಸರ ಶತ ಸಂಭ್ರಮ ದ ಪೂರ್ವಭಾವಿ ಸಿದ್ಧತಾ ಸಭೆ ಗುರುವಾರದಂದು ವಿವೇಕ್ ಶೆಟ್ಟಿ ನ ಗ್ರೀಗುತ್ತು ಶಾರದಾ ಪೂಜೆ ಶತಮಾನೋತ್ಸವ ಸಮಿತಿ ಅಧ್ಯಕ್ಷ ತೆಯಲ್ಲಿ ಜರಗಿತ್ತು ಶತಮಾನೋತ್ಸವದ ಅಂಗವಾಗಿ ಜರಗುವ ಧಾರ್ಮಿಕ ಸಾಂಸ್ಕೃತಿಕ ಸಭಾ ಕಾರ್ಯಕ್ರಮ ಅನ್ನದಾನ ಭಜನಾ ಕಾರ್ಯಕ್ರಮ ಮಾಹಿತಿಯನ್ನು ನೀಡಿದರು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಮಾತನಾಡಿ ಸಜೀಪಮಾಗಣೆಯಲ್ಲಿ ಅತ್ಯಂತ ಮಹತ್ವದ ಅನೇಕ ಧಾರ್ಮಿಕ ಪುಣ್ಯ ಕಾರ್ಯಕ್ರಮಗಳು ನಡೆದಿದ್ದು ಶಾರದಾ ಪೂಜೆಯ ಶತಮಾನೋತ್ಸವ ಪವಿತ್ರ ಕಾರ್ಯದಲ್ಲಿ ಶ್ರದ್ಧಾ ಭಕ್ತಿಯಿಂದನಾವೆಲ್ಲರೂ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಿ ಸಾಮೂಹಿಕವಾಗಿ ಮಾಡುವ ಪೂಜೆಯಿಂದಾಗಿ ನಮ್ಮನಾಡು ಅಭಿವೃದ್ಧಿಯ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.

ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪನಡು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್ ಮಾತಾಡಿ ನಮ್ಮ ಪೂರ್ವಿಕರಿಂದ ಆರಾಧಿಸಲ್ಪಟ್ಟ ದೇವಿಯ ಆರಾಧನೆಯಿಂದ ಸಕಲರಿಗೂ ಸುಖ ಸಂಪತ್ತು ಆಯುಷ್ಯ ಪ್ರಾಪ್ತಿಯಾಗಲಿ ಎಂಬುದಾಗಿ ಶುಭ ಹಾರೈಸಿದರು ಯುವಕ ಸಂಘದ ಅಧ್ಯಕ್ಷ ಎಸ್ ಶ್ರೀಕಾಂತ ಶೆಟ್ಟಿ, ಶಾರದಾ ಪೂಜಾ ಸಮಿತಿ ಅಧ್ಯಕ್ಷ ಶೋಭಿತ ಪೂಂಜ,, ಸದಾಶಿವ ದೇವಸ್ಥಾನ ಈಶ್ವರ ಮಂಗಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ, ಮಂಜಲ್ಪಾದೆ ವಿಷ್ಣುಮೂರ್ತಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ ಕೃಷ್ಣ ಶ್ಯಾಮ್, ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನ ಪಾಡಿ ಆಡಳಿತ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆಗುತ್ತು,ಮಂಗಳೂರುಸ್ಕ್ಯಾಡ್ಸ್ ಅಧ್ಯಕ್ಷ ಕೆ ರವೀಂದ್ರ ಕಂಬಳಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ ರಾಧಾಕೃಷ್ಣ ಆಳ್ವ,ಮಹಿಳಾ ಸಮಿತಿ ಅಧ್ಯಕ್ಷ ಪುಷ್ಪಾವತಿ ಬಂಟ್ವಾಳ ತಾಲೂಕು ಪಿಡಬ್ಲ್ಯೂಡಿ ಗುತ್ತಿಗೆದಾರ ಸಂಘದ ಅಧ್ಯಕ್ಷ ಶೈಲೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.