ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಲಡ್ಕ ಹಾಗೂ ಗೊಳ್ತಾಮಾಜಲ್ ಎ ಒಕ್ಕೂಟದ ತ್ರೈಮಾಸಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

0
16

ಕಲ್ಲಡ್ಕ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ವಿಟ್ಲ ಇದರ ಕಲ್ಲಡ್ಕ ವಲಯದ ಕಲ್ಲಡ್ಕ ಹಾಗೂ ಗೊಳ್ತಮಾಜಲ್ ಎ ಒಕ್ಕೂಟದ ತ್ರೈಮಾಸಿಕ ಸಭೆಯು ಜೂನ್ 7 ರವಿವಾರ ಕಲ್ಲಡ್ಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ಕಲ್ಲಡ್ಕ ವಲಯ ಅಧ್ಯಕ್ಷರಾದ ತುಳಸಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕರಾದ ಶುಕರಾಜ್ ಅವರು ಯೋಜನೆಯ ಗುಂಪುಗಳ ಕಾರ್ಯ, ಜವಾಬ್ದಾರಿ, ಗುಂಪುಗಳಿಗೆ ನೀಡಲಾಗುವ ಸಾಲ ಸೌಲಭ್ಯಗಳು, ಆರೋಗ್ಯ ವಿಮೆ ಹಾಗೂ ಪ್ರಸಕ್ತ ಸಾಲಿನಲ್ಲಿ ಕಲ್ಲಡ್ಕ ಹಾಗೂ ಗೊಳ್ತಮಜಲ್ ಎ ಒಕ್ಕೂಟ ವ್ಯಾಪ್ತಿಯಲ್ಲಿ ಯೋಜನೆಯಿಂದ ದೊರೆತ ಸೌಲಭ್ಯಗಳ ಕುರಿತು ವಿವರವಾದ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗೊಳ್ತಮಜಲ್ ಎ ಒಕ್ಕೂಟವನ್ನು ಕಲ್ಲಡ್ಕ ಒಕ್ಕೂಟದೊಂದಿಗೆ ವಿಲೀನಗೊಳಿಸಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು

ಅಧ್ಯಕ್ಷರಾಗಿ ಚಿದಾನಂದ ಪಟ್ಟಕೋಡಿ ,ಉಪಾಧ್ಯಕ್ಷರಾಗಿ ಲೀಲಾವತಿ ಕೊಳಕಿರು, ಕಾರ್ಯದರ್ಶಿಯಾಗಿ ಸ್ವರ್ಣಲತಾ ಮನಿಮಾಜಲ್ , ಜೊತೆ ಕಾರ್ಯದರ್ಶಿಯಾಗಿ ಧನಂಜಯ ಬೊಂಡಲ ,ಕೊಶಾ ಧಿಕಾರಿಯಾಗಿ ವಿನೋದ.ಹಾಗೂ ವೆಂಕಪ್ಪ ಗೊಳ್ತಮಜಲ್,ಗೀತಾ ಗೊಳ್ತಾಮಜಲ್, ದಾಖಲಾತಿ ಸಮಿತಿಯಲ್ಲಿ ಶಶಿಕಲಾ, ಅರುಣಾಕ್ಷಿ, ತ್ರಿವೇಣಿ, ಯವರನ್ನು ಆಯ್ಕೆ ಮಾಡಲಾಯಿತು.

ವೇದಿಕೆಯಲ್ಲಿ ಗೊಳ್ತಮಾಜಲ್ ಎ ಒಕ್ಕೂಟದ ಅಧ್ಯಕ್ಷ ಮಮತಾ, ಪದಾಧಿಕಾರಿಗಳಾದ ಉಷಾ, ಬೇಬಿ,ಮಮತ, ವೆಂಕಪ್ಪ, ದೇವಕಿ ,ಒಕ್ಕೂಟ ದ ಸೇವಾ ಪ್ರತಿನಿಧಿ ಅಶ್ವಿನಿ ಉಪಸ್ಥಿತರಿದ್ದರು. ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕಕಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here