ಬೆಂಗಳೂರು : ಕರ್ನಾಟಕ ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಮಾಹಿತಿ ನೀಡಿದ್ದು, ಬಾಕಿ ಉಳಿದಿದ್ದ ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಹೊಸ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಮೇ 8, 2026ರಿಂದ ಚಾಲನೆ ನೀಡಲಾಗಿದೆ.
ವಿಭಾಗದ ಅಧಿಕೃತ ಪ್ರಕಟಣೆ ಪ್ರಕಾರ, ಮುಖ್ಯವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಇ-ಶ್ರಮ (E-Shram), ಪಿವಿಟಿಜಿ (PVTG) ಹಾಗೂ ವೈದ್ಯಕೀಯ ತುರ್ತು ಪರಿಸ್ಥಿತಿಗೆ ಸಂಬಂಧಿಸಿದ ಹೊಸ ಪಡಿತರ ಚೀಟಿ ಅರ್ಜಿ ಮತ್ತು ತಿದ್ದುಪಡಿ ಮಾಡ್ಯೂಲ್‌ಗಳನ್ನು ಸಕ್ರಿಯಗೊಳಿಸಲಾಗಿದೆ.
ಪ್ರಮುಖ ಸೇವೆಗಳು ಮತ್ತು ವೇಳಾಪಟ್ಟಿ
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ
- ಅವಧಿ: ಮೇ 8, 2026 ರಿಂದ ಮಾರ್ಚ್ 31, 2027ರವರೆಗೆ
- ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 5:00ರವರೆಗೆ
- ಹೊಸ ರೇಷನ್ ಕಾರ್ಡ್ FI ಅನುಮೋದನೆ
- ಸಮಯ: ಬೆಳಿಗ್ಗೆ 10:00 ರಿಂದ ರಾತ್ರಿ 9:00ರವರೆಗೆ
GSC / ತಿದ್ದುಪಡಿ ಅರ್ಜಿ ಸಲ್ಲಿಕೆ
- ಅವಧಿ: ಮೇ 8, 2026 ರಿಂದ ಮಾರ್ಚ್ 31, 2027ರವರೆಗೆ
- ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 5:00ರವರೆಗೆ
GSC / ತಿದ್ದುಪಡಿ FI ಅನುಮೋದನೆ
- ಸಮಯ: ಬೆಳಿಗ್ಗೆ 10:00 ರಿಂದ ರಾತ್ರಿ 9:00ರವರೆಗೆ
ವಿಭಾಗದ ಮಾಹಿತಿ ಪ್ರಕಾರ, ಎಲ್ಲಾ ಮೂರು ಸರ್ವರ್‌ಗಳಲ್ಲಿ ಸೇವೆಗಳು ಸಕ್ರಿಯಗೊಳಿಸಲಾಗಿದ್ದು, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ರೇಷನ್ ಕಾರ್ಡ್ ಸಂಬಂಧಿತ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಬಹುದು ಎಂದು ಮನವಿ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಥವಾ ಅರ್ಜಿ ಸಲ್ಲಿಸಲು ಸಮೀಪದ ಕರ್ನಾಟಕ ಒನ್ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಬಹುದು.

