ಶ್ರೀ ಮಹಾಲಿಂಗೇಶ್ವರ ಎಜುಕೇಷನಲ್ ಟ್ರಸ್ಟ್ (ರಿ) ನಕ್ರೆ ಕುಕ್ಕುಂದೂರು, ಶ್ರೀ ಮಹಾಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ನಕ್ರೆ 576117, 2026-27ನೇ ಸಾಲಿನ “ಶಾಲಾ ಪ್ರಾರಂಭೋತ್ಸವ ” ಬ್ಯಾಗ್, ಕೊಡೆ, ಪುಸ್ತಕ, ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ.
ಕಾರ್ಯಕ್ರಮಕ್ಕೆ ಶ್ರೀ ಮಹಾಲಿಂಗೇಶ್ವರ ಎಜುಕೇಷನಲ್ ಟ್ರಸ್ಟ್ (ರಿ ) ನಕ್ರೆ ಟ್ರಸ್ಟ್ ನಾ ಅಧ್ಯಕ್ಷರಾದ ಪ್ರಕಾಶ್ ಹೆಗ್ಡೆ ಇವರು ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅರುಣ್ ಕುಮಾರ್ ಶೆಟ್ಟಿ ಗುರುವೈನ್ಸ್ ನಕ್ರೆ, ಅಂಥೋನಿ ಡಿಸೋಜ ಮಾಜಿ ಗ್ರಾಂ. ಪಂಚಾಯತ್ ಸದಸ್ಯರು, ಕ್ಯಾತರೀನ್ ಫೆರ್ನಾಂಡಿಸ್ ಮಾಜಿ ಗ್ರಾಮ ಪಂಚಾಯತ್ ಸದಸ್ಯರು, ಸಂಪತ್ ಸುವರ್ಣ ಅಧ್ಯಕ್ಷರು ಚೇತನ್ ಫ್ರೆಂಡ್ಸ್ ಕ್ಲಬ್ ನಕ್ರೆ, ಸುನೀತಾ ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷರು ನಕ್ರೆ ಹಾಗೂ ಮುಖ್ಯ ಶಿಕ್ಷಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಯಾದ ರಂಜನ್ ಇವರು ಪ್ರಾರ್ಥನೆ ಯನ್ನು ನಡೆಸಿಕೊಟ್ಟರು ಬಂದಂತಹ ಅತಿಥಿಗಳು ದೀಪಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಮಕ್ಕಳಿಗೆ ಬ್ಯಾಗ್, ಕೊಡೆ, ಪಠ್ಯ ಪುಸ್ತಕ, ಬರೆಯುವ ಪುಸ್ತಕ, ಸಮವಸ್ತ್ರ ಹಾಗೂ 2025-26 ನೇ ಸಾಲಿನಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು, ಶಾಲಾ ಗೌರವ ಶಿಕ್ಷಕರಾದ ಶಂಕರ್ ಪೂಜಾರಿಯವರು ಅತಿಥಿಗಳನ್ನು ಸ್ವಾಗತಿಸಿದರು, ಶಶಿಮಣಿ ಸಂಪತ್ ಸುವರ್ಣ ಇವರು ಕಾರ್ಯಕ್ರಮವನ್ನು ನಿರೂಪಿಸಿ, ಶಾಲಾ ಮುಖ್ಯ ಶಿಕ್ಷಕಿಯಾದ ಪ್ರೀತಿ ವಾತ್ಸಲ್ಯ ಇವರು ಧನ್ಯವಾದವನ್ನು ತಿಳಿಸಿದರು.

