ಜೂ. 24 ರಂದು ಕಲಾಕುಂಚ ಕೇರಳ ಗಡಿನಾಡ ಶಾಖೆಯಿಂದ ವಿಚಾರ ಸಂಕಿರಣ

0
25

ದಾವಣಗೆರೆ : ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಕೇರಳದ ಗಡಿನಾಡಿನ ಶಾಖೆಯಿಂದ 24-6-2026 ರಂದು ಬುಧವಾರ ಅಪರಾಹ್ನ 3.30ಕ್ಕೆ ಕಾಸರಗೋಡು ಜಿಲ್ಲೆಯ ಧರ್ಮತ್ಕಡ್ಕ ಯುವಕ ಸಂಘದ ಸಭಾಂಗಣದಲ್ಲಿ ಕೇರಳ ಗ್ರಂಥಾಲಯ ಪಿತಾಮಹ ಎ.ಎನ್.ಫಣಿಕ್ಕರ್ ಸ್ಮರಣಾರ್ಥ 2026 ವಚನಾ ಸಪ್ತಾಹ ಸಲುವಾಗಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

ಕನ್ನಡ ಕಣ್ಮಣಿ ಕಯ್ಯಾರ ಕಿಞ್ಞಣ್ಣ ರೈ ಇವರ ವಿಷಯದ ಕುರಿತು ಕೇರಳದ ಗಡಿನಾಡ ಚಿಂತಕರು, ಸಾಹಿತಿಗಳಾದ ರಾಧಾಕೃಷ್ಣ ಕೆ. ಉಳೆಯತ್ಕಡ್ಕ ಉಪನ್ಯಾಸ ನಡೆಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಸ್ಥಾಪಕ ಅಧ್ಯಕ್ಷರಾದ ಜಯಲಕ್ಷ್ಮಿ ಕಾರಂತ್‌ರವರು ವಹಿಸಲಿದ್ದಾರೆ.

ಸಾರ್ವಜನಿಕವಾಗಿ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ವಿಚಾರ ಸಂಕಿರಣವನ್ನು ಯಶಸ್ವಿಗೊಳಿಸಬೇಕಾಗಿ ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ನೂತನ ಅಧ್ಯಕ್ಷರಾದ ರಾಧಾಮಣಿ ರಾವ್ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here