ತುಳು ರಂಗಭೂಮಿಯ ವಿಸ್ತೃತ ಸ್ವರೂಪವೇ ಯಕ್ಷಗಾನ: ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ

-ಮಂದಾರ ರಾಜೇಶ್
ಬೆಂಗಳೂರಿನ ಆನೇಕಲ್ ನಲ್ಲಿರುವ ಅಲಯೆನ್ಸ್ ವಿಶ್ವವಿದ್ಯಾಲಯದಲ್ಲಿ ತುಳು ಯಕ್ಷಗಾನ ವಿಚಾರಗೋಷ್ಠಿಯಲ್ಲಿ ತುಳು ರಂಗಭೂಮಿಯ ವಿಸ್ತೃತ ಸ್ವರೂಪವೇ ಯಕ್ಷಗಾನ ಎಂದು ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅಭಿಪ್ರಾಯ ಪಟ್ಟರು. “ಜಾಲಾಟದಿಂದ ಬಯಲಾಟದ ವರೆಗಿನ ತುಳು ರಂಗಭೂಮಿಯ ವಿಕಾಸದ ಹಂತದಲ್ಲಿ ಹಲವು ಮಹತ್ವದ ಬೆಳವಣಿಗೆಗಳಾಗಿವೆ. ಯಕ್ಷಗಾನವು ಅದರ ವಿಸ್ತೃತ ಸ್ವರೂಪವಾಗಿದೆ. ಗಾನ, ನಾಟ್ಯ, ಅಭಿನಯ, ವೇಷಭೂಷಣ ಮತ್ತು ಮಾತುಗಾರಿಕೆಯನ್ನೊಳಗೊಂಡ ಇದು ಸರ್ವಾಂಗಗಳಲ್ಲೂ ಒಂದು ಪರಿಪೂರ್ಣ ಕಲೆಯಾಗಿದೆ.

ತುಳು ಭಾಷಿಕರೇ ಇದನ್ನು ವಿಶೇಷವಾಗಿ ಬೆಳೆಸಿದ್ದಾರೆ. ಈ ಹಿನ್ನೆಲೆಯಲ್ಲಿ ತುಳು ಯಕ್ಷಗಾನಕ್ಕೆ ಸುದೀರ್ಘ ಪರಂಪರೆಯಿದೆ,” ಎಂದು ಸಾಹಿತಿ, ಸಂಶೋಧಕ ಹಾಗೂ ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಹೇಳಿದರು.
ಬೆಂಗಳೂರಿನ ಅಲಯೆನ್ಸ್ ವಿಶ್ವವಿದ್ಯಾಲಯ ಮತ್ತು ತುಳು ವರ್ಲ್ಡ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಜರುಗಿದ ‘ತುಳು ಯಕ್ಷಗಾನ ಪ್ರಸಂಗ ಮತ್ತು ಪ್ರಯೋಗ – ವಿಚಾರಗೋಷ್ಠಿ ಹಾಗೂ ಪ್ರಾತ್ಯಕ್ಷಿಕೆ’ ಕಾರ್ಯಕ್ರಮದಲ್ಲಿ ಅವರು ಮುಖ್ಯ ಉಪನ್ಯಾಸ ನೀಡಿ ಮಾತನಾಡಿದರು-

