ಬಂಟ್ವಾಳ:ಇಲ್ಲಿನ ಶಂಭೂರು ಗ್ರಾಮದಲ್ಲಿ ಕೆಲವೊಂದು ಕೌಟುಂಬಿಕ ವಿವಾದ ಮತ್ತು ರಾಜಕೀಯ ಲೇಪದ ಆರೋಪಗಳಿಂದ ಪೊಲೀಸರೊಂದಿಗೆ ಬಂದು ಧಾಮರ್ಿಕ ದತ್ತಿ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಗಿತಗೊಳಿಸಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಅಲಂಗಾರ ಮಾಡ ಶ್ರೀ ಕಲ್ಲಮಾಳಿಗೆ ಇಷ್ಟದೇವತಾ ಅರಸು ಮುಂಡಿತ್ತಾಯ ದೈವಸ್ಥಾನದಲ್ಲಿ ಧರ್ಮರಸು ನೇಮೋತ್ಸವವು ಸಂಪ್ರದಾಯದಂತೆ ಬರ್ಕೆ ವಲಸರಿಯೊಂದಿಗೆ ಗುರುವಾರ ರಾತ್ರಿ ನಿರಾತಂಕವಾಗಿ ನಡೆಯಿತು.
ಈ ಗ್ರಾಮಕ್ಕೆ ಸಂಬಂಧಪಟ್ಟ ನೇಮೋತ್ಸವ ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಇತ್ತೀಚೆಗೆ ಬಿ.ಸಿ.ರೋಡು ಆಡಳಿತ ಸೌಧ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಅರಸು ವೈದ್ಯನಾಥ ಜುಮಾದಿ ಬಂಟ ದೈವಗಳ ಆರಾಧನಾ ಸಮಿತಿ ಅಧ್ಯಕ್ಷ ನವೀನ್ ಕೋಟ್ಯಾನ್, ಅಲಂಗಾರಮಾಡ ಶ್ರೀ ಕಲ್ಲಮಾಳಿಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣೇಶ್ ಪ್ರಸಾದ್, ಅಡೆಪಿಲ ಭಂಡಾರದ ಮನೆ ಟ್ರಸ್ಟ್ ಅಧ್ಯಕ್ಷ ಮೀನ ಭಗವಾನ್ ದಾಸ್ ಮತ್ತು ಜೋಡುಸ್ಥಾನ ದೈವಸ್ಥಾನ ಮುಖ್ಯಸ್ಥ ಎನ್. ಸೀತಾರಾಮ ಪೂಜಾರಿ ಇವರು ಜಂಟಿಯಾಗಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಇದೀಗ ಈ ರಿಟ್ ಅಜರ್ಿ ಪುರಸ್ಕರಿಸಿದ ನ್ಯಾಯಾಲಯವು ಸಂಬಂಧಪಟ್ಟ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ನಿದರ್ೇಶನ ನೀಡಿ, ‘ಯಾವುದೇ ಅಡ್ಡಿ ಇರದಂತೆ ನೇಮೋತ್ಸವ ನಡೆಸಲು ಆದೇಶಿಸಿದೆ’ ಎಂದು ತಿಳಿಸಿದ್ದಾರೆ.
ತಂತ್ರಿ ಅನಂತ ಭಟ್ ಪರನೀರು, ರಾಜ್ಯ ಧಾಮರ್ಿಕ ಪರಿಷತ್ ಸದಸ್ಯ ರವಿಶಂಕರ್ ಶೆಟ್ಟಿ ಬಡಾಜೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಆನಂದ ಶಂಭೂರು, ಉತ್ಸವ ಸಮಿತಿ ಉಪಾಧ್ಯಕ್ಷ ರಾಜೇಶ್, ಪ್ರಮುಖರಾದ ಸಚ್ಚಿದಾನಂದ ಶೆಟ್ಟಿ ಬೊಂಡಾಲ, ವಸಂತ ಇರಂತಬೆಟ್ಟು, ಮೋನಪ್ಪ ಸಪಲ್ಯ ಬಕರ್ೆ, ನವೀನ್ ಬಪ್ಪಳಿಗೆ, ಕೇಶವ ಬರ್ಕೆ, ಕೀರ್ತನ್ ಪಿ., ರಾಮಚಂದ್ರ ಸಪಲ್ಯ, ವಿಜಯ ಶಂಭೂರು, ಯೋಗೀಶ್ ಸಾನದಮನೆ, ರಮೇಶ ಭಂಡಾರದಮನೆ, ಪ್ರಧಾನ ರ‍್ಚಕ ಜಗನ್ನಾಥ ಪೂಜಾರಿ, ರ‍್ಚಕರಾದ ಶೇಖರ ಪೂಜಾರಿ, ಅಣ್ಣು ಯಾನೆ ಬೋಗನಾಥ ಪೂಜಾರಿ ಮತ್ತಿತರರು ಇದ್ದರು. ಇದೇ ವೇಳೆ ನಡೆದ ಸರ‍್ವಜನಿಕ ಅನ್ನಸಂರ‍್ಪಣೆಯಲ್ಲಿ ಅಪಾರ ಮಂದಿ ಭಕ್ತರು ಪಾಲ್ಗೊಂಡರು. ಗ್ರಾಮಾಂತರ ಠಾಣಾಧಿಕಾರಿ ಮಂಜುನಾಥ್ ನೇತೃತ್ವದ ಪೊಲೀಸರು ಬಿಗಿ ಬಂದೋಬಸ್ತು ಏರ್ಪಡಿಸಿದ್ದರು.
ಶಂಭೂರು: ಹೈಕೋರ್ಟ್ ಮೆಟ್ಟಿಲೇರಿದ್ದ ವಿವಾದ ಸುಖಾಂತ್ಯ ಸ್ಥಗಿತಗೊಂಡಿದ್ದ ನೇಮೋತ್ಸವಕ್ಕೆ ಮರು ಚಾಲನೆ
RELATED ARTICLES