ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರಷಟ್ ಶಿರ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಾನದಲ್ಲಿ ಷಷ್ಟಿ ಮಹೋತ್ಸವ ಆಚರಣೆ

0
76

ಉಡುಪಿ ದೊಡ್ಡನ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಗಾಯತ್ರಿ ಧ್ಯಾನಪೀಠದಲ್ಲಿರುವ ವಲ್ಲಿ ದೇವಯಾನಿ ಸಹಿತವಾದ ಷಟ್ ಶಿರಾ ಸುಬ್ರಮಣ್ಯ ಸ್ವಾಮಿಯ ಸನ್ನಿಧಾನದಲ್ಲಿ ಷಷ್ಟಿ ಮಹೋತ್ಸವವು ಇದೇ ತಿಂಗಳ ತಾರೀಕು 26ರ ಬುಧವಾರದಂದು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ವಿಖ್ಯಾತ್ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಲಿರುವುದು..

ಆ ಪ್ರಯುಕ್ತ ಕ್ಷೇತ್ರದ ಬಾಲಸುಬ್ರಹ್ಮಣ್ಯನ ಸನ್ನಿಧಾನದಲ್ಲಿ ನವಕ ಕಲಶ ಪ್ರಧಾನ ಹೋಮ ಕಲಶ ಅಭಿಷೇಕ, ಧ್ಯಾನ ಪೀಠದಲ್ಲಿನ ಸನ್ನಿಧಾನದಲ್ಲಿ ಪಂಚವಿ0ಶತಿ ಕಲಶಾರಾಧನೆ, ಕಳಸಾಭಿಷೇಕ, ಶ್ರೀ ಸುಬ್ರಹ್ಮಣ್ಯ ಸಹಸ್ರನಾಮ ಪಾಯಸ ಹೋಮ ಪವಮಾನ ಕಲಶಾಭಿಷೇಕ, ಬ್ರಾಹ್ಮಣ ಸುವಾಸಿನಿ ಆರಾಧನೆ,ಪ್ರಸನ್ನ ಪೂಜೆ ಮಹಾ ಅನ್ನಸಂತರ್ಪಣೆ ಹಾಗೂ ಸಂಜೆ ರಂಗಪೂಜೆ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ

LEAVE A REPLY

Please enter your comment!
Please enter your name here