ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ನೆಟ್ಲದಲ್ಲಿ ಲೋಕಕಲ್ಯಾಣಾರ್ಥಕವಾಗಿ ಶ್ರೀ ದೇವರಿಗೆ ಸೀಯಾಳ ಅಭಿಷೇಕ

0
6

ಕಲ್ಲಡ್ಕ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಲಡ್ಕ ವಲಯದ ವತಿಯಿಂದ,ಜನಜಾಗೃತಿ ವೇದಿಕೆ ಕಲ್ಲಡ್ಕ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಲ್ಲಡ್ಕ ಇದರ ಸಹಕಾರದೊಂದಿಗೆ ಲೋಕಕಲ್ಯಾಣಾರ್ಥಕವಾಗಿ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ನೆಟ್ಲದಲ್ಲಿ ಶ್ರೀ ದೇವರಿಗೆ ಸೀಯಾಳ ಅಭಿಷೇಕ ಮೇ 18 ಸೋಮವಾರ ನಡೆಯಿತು
ಪುರೋಹಿತರಾದ ಪ್ರಕಾಶ್ ಭಟ್ ಅಭಿಷೇಕ ಕಾರ್ಯಕ್ರಮ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕ ಸುಖರಾಜ್, ಜನಜಾಗೃತಿ ವೇದಿಕೆ ಕಲ್ಕಡ್ಕ ವಲಯ ಅಧ್ಯಕ್ಷ ಭಟ್ಯಪ್ಪ ಶೆಟ್ಟಿ,ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷೆ ತುಳಸಿ,ಗೊಳ್ತಮಜಲ್ ಒಕ್ಕೂಟ ಅಧ್ಯಕ್ಷ ಸೀತಾರಾಮ್ ಶೆಟ್ಟಿ,ಬೋಳಂತೂರ್ ಒಕ್ಕೂಟ ಅಧ್ಯಕ್ಷೆ ಸೀತಾ ರಾಮಚಂದ್ರ ಆಚಾರ್ಯ, ವೀರಕಂಭ ಒಕ್ಕೂಟ ಅಧ್ಯಕ್ಷೆ ಶಾಂಭವಿ ಆಚಾರ್ಯ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ ವಿದ್ಯಾ, ನಿಯೋಜಿತ ಅಧ್ಯಕ್ಷ ಗಣೇಶ್, ಶೌರ್ಯ ತಂಡದ ಸದಸ್ಯರುಗಳು, ಒಕ್ಕೂಟಗಳ ಸೇವ ಪ್ರತಿನಿಧಿಗಳಾದ ಲೀಲಾವತಿ, ರೇವತಿ, ಸುಕನ್ಯ, ಅಶ್ವಿನಿ,ಗ್ರಾಮಾಭಿವೃದ್ಧಿ ಯೋಜನೆ ಪದಾಧಿಕಾರಿಗಳು, ಪ್ರಗತಿ ಬಂದು ಸ್ವಸಹಾಯ ಸಂಘದ ಸದಸ್ಯರುಗಳು, ದೇವಸ್ಥಾನದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here