ನ.07 ಕಾಪು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ವಿಶೇಷ ಕಾರ್ಯಕ್ರಮ

0
26

ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ವೀರ ಸೈನಿಕರ ಸೇವೆಯನ್ನು ಗೌರವಿಸಿ, ಅವರ ಕುಟುಂಬದೊಂದಿಗೆ ದೀಪಾವಳಿ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳುವ ಉದ್ದೇಶದಿಂದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾಪು ಮಂಡಲದ ವತಿಯಿಂದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

“ದೇಶ ಕಾಯುವ ವೀರ ಸೈನಿಕರಿಗೆ ಗೌರವದ ದೀಪಾವಳಿ” ಎಂಬ ಆಶಯದೊಂದಿಗೆ ನವೆಂಬರ್ 7, 2026ರಂದು ಸಂಜೆ 7 ಗಂಟೆಗೆ ಮೂಡುಬೆಳ್ಳೆಯ ತಿರ್ಲಪಲ್ಕೆ ಎಂಬಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ದೇಶದ ಗಡಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾ ದೇಶದ ಜನರ ಸುರಕ್ಷತೆಗಾಗಿ ಸೇವೆ ಸಲ್ಲಿಸುವ ಸೈನಿಕರ ಕುಟುಂಬದೊಂದಿಗೆ ಹಬ್ಬದ ಸಂತೋಷವನ್ನು ಹಂಚಿಕೊಳ್ಳುವುದು, ಅವರ ತ್ಯಾಗ ಮತ್ತು ಸೇವೆಗೆ ಪ್ರೀತಿ, ಗೌರವ ಹಾಗೂ ಕೃತಜ್ಞತೆ ಸಲ್ಲಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಈ ಕಾರ್ಯಕ್ರಮದ ಕುರಿತು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಸಂತೋಷ್ ಕುಮಾರ್ ಮೂಡುಬೆಳ್ಳೆ, ನ್ಯಾಯವಾದಿ, ಉಡುಪಿ ಅವರು ಮಾಹಿತಿ ನೀಡಿದ್ದಾರೆ.