ಕಾಪು ವಿಧಾನಸಭಾ ಕ್ಷೇತ್ರದ ತೆಂಕ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ 40 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ಇಂದು ದಿನಾಂಕ 29-10-2026 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.
ತೆಂಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೂಂದಾಡು ಯಶೋಧ ಮುಖಾರ್ತಿ ಮನೆಯಿಂದ ಸದಾಶಿವ ಬಂಗೇರ ಮನೆ ತನಕ ರಸ್ತೆ ಅಭಿವೃದ್ಧಿ – 20 ಲಕ್ಷ, ಹೈಸ್ಕೂಲ್ ರಸ್ತೆ ಬಳಿ ಶಾರದಾ ಕರ್ಕೇರರವರ ಮನೆಯಿಂದ ವಿನೋದ ರವರ ಮನೆ ತನಕ ರಸ್ತೆ ಅಭಿವೃದ್ಧಿ – 20 ಲಕ್ಷ, ಸೇರಿದಂತೆ ಒಟ್ಟು 40 ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಶಾರದಾ ಪೂಜಾರಿ, ತೆಂಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಯಶ್ರೀ ಪೂಜಾರಿ, ವಿನಯ್ ಶೆಟ್ಟಿ, ಸಂತೋಷ, ಮನೋಜ್ ಶೆಟ್ಟಿ, ರತ್ನಾಕರ, ಶಕ್ತಿ ಕೇಂದ್ರ ಪ್ರಮುಖ್ ಕೇಶವ ಮೊಯಿಲಿ, ಧರ್ಮರಾಜ್, ಪ್ರೀತಮ್, ರೇಣುಕಾ, ಸುನಿತಾ ಹಾಗೂ ಪಕ್ಷದ ಹಿರಿಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

