ವೇಣೂರು: ರಾಜ್ಯದ ಅತ್ಯಂತ ಪ್ರಭಾವೀ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ಬೆಳ್ತಂಗಡಿ ತಾಲೂಕಿನ ಪೆರಿಂಜೆ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ಮೂಲ ದೈವಸ್ಥಾನದಲ್ಲಿ ಆ.16ರಂದು ಸಿಂಹಸಂಕ್ರಮಣದ ಪ್ರಯುಕ್ತ ಹೂವಿನ ಪೂಜೆ, ಆಟಿಕೋಲ, ತುಲಾಭಾರ ಸೇವೆ ಜರಗಲಿದೆ.
ಕ್ಷೇತ್ರದಲ್ಲಿ ಮಧ್ಯಾಹ್ನ ಹೂವಿನಪೂಜೆ, ಪ್ರಸಾಧ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ವಿಶೇಷವಾಗಿ ಅದೇ ದಿನ ರಾತ್ರಿ 7-30ರಿಂದ ಆಟಿಕೋಲ ವಿಶೇಷ ಹಾಗೂ ರಾತ್ರಿ 10 ಗಂಟೆಯಿಂದ ತುಲಾಭಾರ ಸೇವೆ ಜರಗಲಿದೆ ಎಂದು ಕ್ಷೇತ್ರದ ಅನುವಂಶೀಯ ಆಡಳಿತದಾರರಾದ ಎ. ಜೀವಂಧರ ಕುಮಾರ್ ತಿಳಿಸಿದ್ದಾರೆ.

