ದಾವಣಗೆರೆ: ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಇತ್ತೀಚಿಗೆ ಬೆಂಗಳೂರಿನ ಆರ್. ಅಶೋಕ್‌ರವರ ಶಾಸಕರ ಕಛೇರಿ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ಮಹಾಸಭೆಯಲ್ಲಿ ಸರ್ವಾನುಮತದಿಂದ ಹಿರಿಯ ಗಾಯಕರಾದ ವೈ.ಕೆ. ಮುದ್ದುಕೃಷ್ಣ ಅವಿರೋಧವಾಗಿ ಸರ್ವಾನುಮತದಿಂದ ಪುನರಾಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ದಾವಣಗೆರೆ ಜಿಲ್ಲಾಧ್ಯಕ್ಷರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

ಕಾರ್ಯಾಧ್ಯಕ್ಷರಾಗಿ ಡಾ. ಕಿಕ್ಕೇರಿ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿಯಾಗಿ ನಗರ ಶ್ರೀನಿವಾಸ್ ಉಡುಪ, ಜಂಟಿ ಕಾರ್ಯದರ್ಶಿಯಾಗಿ ನಾಗಚಂದ್ರಿಕಾ ಭಟ್, ಖಜಾಂಚಿಯಾಗಿ ಪ್ರಶಾಂತ್ ಉಡುಪ, ಪ್ರಧಾನ ಸಂಚಾಲಕರಾಗಿ ಜೋಸೆಫ್ ಹಿರೋನಿಮಸ್ ಮತ್ತು ಸುನೀತಾ ಮುರಳಿ, ಸಮಿತಿ ಸದಸ್ಯರಾಗಿ ಪ್ರವೀಣ್ ಬಿ.ವಿ. ಡೇವಿಡ್ ಮಂಡ್ಯ, ಡಾ.ನಾಗರಾಜ ವಿ.ಬೈರಿ, ಡಾ. ಅಮೀತ್ ಶೇಖರ್, ನಾಗೇಂದ್ರಕುಮಾರ್, ಜಾವಗಲ್ ಪ್ರಸನ್ನಕುಮಾರ್, ನಾಮನಿರ್ದೇಶಕರಾಗಿ ಡಾ. ಅಪ್ಪಗೆರೆ ತಿಮ್ಮರಾಜು, ಸಿ.ಎಂ.ನರಸಿಂಹಮೂರ್ತಿ, ಸಲಹಾ ಸಮಿತಿ ಸದಸ್ಯರಾಗಿ ಡಾ. ನಾ.ದಾ.ಶೆಟ್ಟಿ, ಪುತ್ತೂರು ನರಸಿಂಹನಾಯಕ್, ಇಂದು ವಿಶ್ವನಾಥ್, ರೋಹಿಣಿ ಮೋಹನ್, ಮಾಲತಿ ಶರ್ಮ, ಶ್ರೀನಿವಾಸ ಜಿ.ಕಪ್ಪಣ್ಣ, ಬಿ.ವಿ. ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.
ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಕರ್ನಾಟಕದ ಎಲ್ಲಾ ಜಿಲ್ಲಾ ಸಮಿತಿ, ತಾಲ್ಲೂಕು ಸಮಿತಿಯವರು ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ಸರ್ವರಿಗೂ ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ.

