ಉಡುಪಿ : ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ ಉಡುಪಿ ಇಲ್ಲಿನ ಜಿ ಎಸ್ ಬಿ ಯುವಕ ಮಂಡಳಿಯ ಆಶ್ರಯದಲ್ಲಿ ವಸಂತಮಾಸದ ಕೊನೆಯ ವಸಂತಪೂಜೆ ಮೇ 16 ರಂದು ವೈಭವದಿಂದ ನೆರವೇರಿತು.

ಶ್ರೀದೇವರಿಗೆ ವಿಶೇಷ ಅಲಂಕಾರ , ವಿಶೇಷ ಹೂವಿನ ಅಲಂಕಾರದಲ್ಲಿ ಶ್ರಾಂಗಾರಗೊಂಡ ಲಾಲಕಿ ಯಲ್ಲಿ ಶ್ರೀದೇವರ ಉತ್ಸವ ವಿವಿಧ ಪಂಚಾ ಮಂಗಳವಾದ್ಯ ದೊಂದಿಗೆ ಪಲ್ಲಕ್ಕಿ ಉತ್ಸವ ನೆಡೆಯಿತು , ವಸಂತ ಮಂಟಪದ ರಜತ ಪೀಠದಲ್ಲಿ ಶ್ರೀದೇವರಿಗೆ ಮಹಾಪೂಜೆ ಭಜನೆ , ವೇದ ಮಂತ್ರ ಪಠಣೆ , ಭರತನಾಟ್ಯ ಸಹಿತ ಅಷ್ಟಾವಧಾನ ಸೇವೆ , ಮಹಾಪೂಜೆ ಬಳಿಕ ವಿವಿಧ ಬಗೆಯ ಪ್ರಸಾದ ವಿತರಣೆ ನೆಡೆಯಿತು.
ದೇವಳದ ಪ್ರಧಾನ ಅರ್ಚಕರಾದ ದಯಾಘನ್ ಭಟ್ , ದೀಪಕ್ ಭಟ್ , ಗಿರೀಶ್ ಭಟ್ , ಪ್ರಭಾಕರ್ ಭಟ್ , ಜಿ ಎಸ್, ಬಿ ಯುವಕ ಅಧ್ಯಕ್ಷ ನಿತೇಶ್ ಶೆಣೈ , ನರಹರಿ ಪೈ ,ಪಾಂಡುರಂಗ ಪೈ , ಕಾರ್ತಿಕ್ ನಾಯಕ್ , ಭಾಸ್ಕರ ಶೆಣೈ ,ವಿಠಲ್ ನಾಯಕ್ , ವಿಶಾಲ್ ಶೆಣೈ , ಅಜೇಯ ಕಾಮತ್ ಹಾಗೂ ಆಡಳಿತ ಮಂಡಳಿಯ ಸದಸ್ಯರು , ವಿವಿಧ ಭಜನಾ ಮಂಡಳಿಯ ಸದಸ್ಯರು , ಜಿ ಎಸ್, ಬಿ ಯುವಕ /ಮಹಿಳಾ ಮಂಡಳಿಯ ಸದಸ್ಯರು , ನೂರಾರು ಸಮಾಜ ಭಾಂದವರು ಉಪಸ್ಥರಿದ್ದರು.

