ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯ ಸಂಚಾಲಕರಾದ, ಹಾಗೂ ಶ್ರೀ ಕ್ಷೇತ್ರದ ಅನ್ನಪೂರ್ಣ ಅನ್ನಛತ್ರದ ಮುಖ್ಯ ಪ್ರಬಂಧಕರಾದ ಜಿ ಸುಬ್ರಹ್ಮಣ್ಯ ಪ್ರಸಾದ್ ರವರ ಮಗಳಾದ ಮಾಧುರ್ಯ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಅವರ ಸ್ವಗೃಹಸ್ಪತಿ ಸುಮೇಧಾದಲ್ಲಿ ಸನ್ಮಾನ ನಡೆಸಲಾಯಿತು.

ಈ ಸಂದರ್ಭದಲ್ಲಿ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರುರವರು ಉಪಸ್ಥಿತರಿದ್ದು, ಈ ಅದ್ಭುತ ಕಲಿಕೆಯ ದಿನಗಳು ನಿಮ್ಮ ಭವಿಷ್ಯಕ್ಕೆ ಭದ್ರ ಬುನಾದಿಯಾಗಲಿ. ಶಿಸ್ತು, ಕಠಿಣ ಪರಿಶ್ರಮ ಮತ್ತು ಸದಾ ಕಲಿಯುವ ಆಸಕ್ತಿ ನಿಮ್ಮದಾಗಲಿ.ನಿಮ್ಮ ಕನಸುಗಳೆಲ್ಲವೂ ನನಸಾಗುವಂತೆ ಆ ಭಗವಂತನು ನಿಮಗೆ ಸನ್ಮತಿ ನೀಡಲಿ.ಸದಾ ಉತ್ಸಾಹದಿಂದ ಹೊಸ ವಿಷಯಗಳನ್ನು ಕಲಿಯುತ್ತಾ ಜೀವನದಲ್ಲಿ ಮುನ್ನಡೆಯಿರಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜಿ ಸುಬ್ರಹ್ಮಣ್ಯ ಪ್ರಸಾದ್, ತಾಯಿ ಮಧುರಾ,ತಮ್ಮ ಧನ್ವಿಕುಮಾರ್, ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ರವಿರಾಜ್ ಚಾರ್ಮಾಡಿ,ಗೌರವ ಸಲಹೆಗಾರರಾದ ನಾಗೇಶ್ ಬಿ ನೆರಿಯ, ಕಾರ್ಯದರ್ಶಿ ಶ್ರೀ ಚಂದ್ರಶೇಖರಗೌಡ ಇಂದಬೆಟ್ಟು ಜೊತೆಕಾರ್ಯದರ್ಶಿ ಪ್ರತಿಮಾ, ಕೋಶಾಧಿಕಾರಿ ಗಣೇಶ್ ಕನ್ನಾಜೆ ಗುರುವಾಯನಕೆರೆ ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿಗಳಾದ ಸಂದೇಶ್ ಮದ್ದಡ್ಕ, ಧರ್ಮಸ್ಥಳ ವಲಯ ಗ್ರಾಮಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ರವೀಂದ್ರ ಬಿ, ಭಜನಾ ಪರಿಷತ್ತಿನ ಉಜಿರೆ ವಲಯದ ಅಧ್ಯಕ್ಷರಾದ ಶ್ರೀಕೃಷ್ಣಯ್ಯ ಆಚಾರ್, ಶ್ರೀಮಂಜುನಾಥ್, ವೇದಾವತಿ ಹೊನ್ನೇಶ್ ಮತ್ತಿತರರು ಉಪಸ್ಥಿತರಿದ್ದು ಶುಭ ಹಾರೈಸಿದರು.

