ಬಿಜೆಪಿ ಉಡುಪಿ ಜಿಲ್ಲಾ ಪ್ರಕೋಷ್ಠ, ಲಯನ್ಸ್ ಕ್ಲಬ್ ಪರ್ಕಳ ಹಾಗೂ ಉಡುಪಿ ಜಿಲ್ಲಾ ಚಿತ್ರಕಲಾ ಸಂಘಟನೆ (ರಿ)ಗಳ ಆಯೋಜನೆಯಲ್ಲಿ ರಾಜ್ಯಮಟ್ಟದ ಗೋಡು ದೀಪ ಸ್ಪರ್ಧೆ ಮತ್ತು ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯನ್ನುನವೆಂಬರ್ ಎಂಟರಂದು ಭಾನುವಾರದಂದು ಬೆಳಿಗ್ಗೆ 9.00 ಗಂಟೆಗೆ ಉಡುಪಿಯ ರಾಜಾಂಗಣದಲ್ಲಿ ಆಯೋಜಿಸಲಾಗಿದೆ್ ಎಂದು ಬಿಜೆಪಿ ಉಡುಪಿ ಜಿಲ್ಲಾ ಪ್ರಕೋಷ್ಠದ ಸಹ ಸಂಯೋಜಕ ಕೆ ವಿಜಯ ಕೊಡವೂರು ಮಾಹಿತಿ ನೀಡಿದ್ದಾರೆ.
ಭಾರತೀಯ ಸಂಸ್ಕೃತಿ, ಸಂಪ್ರದಾಯ, ಕಲಾಪ್ರತಿಭೆ ಹಾಗೂ ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ಸ್ಪರ್ಧಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ರಾಜ್ಯಮಟ್ಟದ ಗೋಡು ದೀಪ ಸ್ಪರ್ಧೆಯಲ್ಲಿ ಸಾರ್ವಜನಿಕ ವಿಭಾಗ ಹಾಗೂ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಕಿರಿಯರ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಸಾರ್ವಜನಿಕ ವಿಭಾಗದಲ್ಲಿ ಪ್ರಥಮ ಬಹುಮಾನ ₹10,000, ದ್ವಿತೀಯ ₹5,000 ಹಾಗೂ ತೃತೀಯ ₹3,000 ಜೊತೆಗೆ ಟ್ರೋಫಿಯನ್ನು ನೀಡಲಾಗುವುದು. ಕಿರಿಯರ ವಿಭಾಗದಲ್ಲಿ ಪ್ರಥಮ ₹5,000, ದ್ವಿತೀಯ ₹3,000 ಹಾಗೂ ತೃತೀಯ ₹2,000 ನಗದು ಬಹುಮಾನ ಜೊತೆಗೆ ಟ್ರೋಫಿಯನ್ನು ನೀಡಲಾಗುವುದು. ಎರಡೂ ವಿಭಾಗಗಳಲ್ಲಿ ತಲಾ ಐದು ಸಮಾಧಾನಕರ ಬಹುಮಾನಗಳನ್ನೂ ನೀಡಲಾಗುವುದು.
ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ “ಅಭಿವೃದ್ಧಿಯೊಂದಿಗೆ ಮೋದಿ” ವಿಷಯದ ಮೇಲೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದ್ದು, ಸಾರ್ವಜನಿಕ ವಿಭಾಗದಲ್ಲಿ ಪ್ರಥಮ ಬಹುಮಾನ ₹4,500, ದ್ವಿತೀಯ ₹3,000 ಹಾಗೂ ಹಿರಿಯರ ವಿಭಾಗದಲ್ಲಿ (8ನೇ ತರಗತಿಯಿಂದ 10ನೇ ತರಗತಿವರೆಗೆ) ಪ್ರಥಮ ₹3,000, ದ್ವಿತೀಯ ₹2,000 ನಗದು ಬಹುಮಾನ ಜೊತೆಗೆ ಟ್ರೋಫಿಯನ್ನು ನೀಡಲಾಗುವುದು. ಎರಡೂ ವಿಭಾಗಗಳಲ್ಲಿ ತಲಾ ಐದು ಸಮಾಧಾನಕರ ಬಹುಮಾನಗಳನ್ನೂ ನೀಡಲಾಗುವುದು.
ಕಿರಿಯರ ವಿಭಾಗದಲ್ಲಿ (5ನೇ ತರಗತಿಯಿಂದ 7ನೇ ತರಗತಿವರೆಗೆ) “ಪರಿಸರ” ವಿಷಯದ ಮೇಲೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದ್ದು, ಪ್ರಥಮ ಬಹುಮಾನ ₹2,000, ದ್ವಿತೀಯ ₹1,000 ನಗದು ಬಹುಮಾನ ಜೊತೆಗೆ ಟ್ರೋಫಿಯನ್ನು ನೀಡಲಾಗುವುದು. ಎರಡೂ ವಿಭಾಗಗಳಲ್ಲಿ ತಲಾ ಐದು ಸಮಾಧಾನಕರ ಬಹುಮಾನಗಳನ್ನೂ ನೀಡಲಾಗುವುದು ಎಂದು ಮಾಹಿತಿ ನೀಡಿದರು.

