ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ: ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

0
4

ಪುತ್ತೂರು : ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗದ ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜು ಕಬಕ ಇವರ ಸಹಯೋಗದಲ್ಲಿ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.

ಪಂದ್ಯಾಟದಲ್ಲಿ ಕಾಲೇಜಿನ ಬಾಲಕರ ತಂಡ ದ್ವಿತೀಯ ಸ್ಥಾನ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಬಾಲಕರ ತಂಡದಲ್ಲಿ ಪ್ರಥಮ ಪಿಯುಸಿಯ ಕಿಶನ್ ಕೆ.ವೈ., ತ್ರಿಶಿಕ್ ಕೆ. ಗೌಡ, ಯಶ್ವಿತ್ ಗೌಡ, ಪವನ್ ಕುಮಾರ್, ಮೋಕ್ಷಿತ್ ಕೆ.ಜೆ., ಅನ್ವಿತ್ ಎಸ್.ಪಿ., ನಿದೀಶ್ ಶೆಟ್ಟಿ, ಮನ್ವಂತ್ ಹಾಗೂ ದ್ವಿತೀಯ ಪಿಯುಸಿಯ ಪ್ರಣಮ್ ಪಿ. ಶೆಟ್ಟಿ, ಚಿಂತನ್ ಕೆ. ಮತ್ತು ಕೆ.ಆರ್. ದಿಶಾಂತ್ ಭಾಗವಹಿಸಿದ್ದರು.

ಬಾಲಕಿಯರ ತಂಡದಲ್ಲಿ ಪ್ರಥಮ ಪಿಯುಸಿಯ ವಿನ್ಯಾ ರೈ, ಸೃಷ್ಟಿ ಎಸ್.ಆರ್. ರೈ, ವೀಕ್ಷಾ ಬಿ.ಆರ್., ಧರಣಿ ಕೆ.ಟಿ., ಶ್ರಾವ್ಯ ಕೆ., ಸುಶಾನಿ, ಸಿ.ಎಸ್. ಚಿನ್ಮಯ್ ಗೌಡ, ಪಾವನಿ ಕೆ., ವಸಿಷ್ಠ, ಸಾನ್ವಿ ಎಸ್. ಹಾಗೂ ತನ್ವಿ ಮತ್ತು ದ್ವಿತೀಯ ಪಿಯುಸಿಯ ಧನ್ವಿ ಎ.ಆರ್. ಭಾಗವಹಿಸಿದ್ದರು.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್, ಡಾ. ಜ್ಯೋತಿ ಹಾಗೂ ಯತೀಶ್ ಅವರ ನೇತೃತ್ವದಲ್ಲಿ ತಂಡಗಳಿಗೆ ತರಬೇತಿ ನೀಡಲಾಗಿತ್ತು.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.