ಬಿಲ್ಲವ ಶಕ್ತಿ ಮಾರೂರು ವಾರ್ಷಿಕ ಮಹಾಸಭೆ ಆಟಿಡೊಂಜಿ ದಿನ

0
15

ಮಕ್ಕಳಿಗೆ ಕಷ್ಟ ಎದುರಿಸುವುದನ್ನು ಕಲಿಸಿ- ಸೋಮಶಾಂತಿ

ಮಾರೂರು : ಹಿಂದಿನ ಕಾಲದ ಕಷ್ಟದ ದಿನಗಳನ್ನು ಯಾರೂ ಮರೆಯಬಾರದು. ಸುಖ ಸಂತೋಷದ ಜೀವನ ನಡೆಸುತ್ತಿರುವ ನಮ್ಮ ಮಕ್ಕಳಿಗೆ ಹಿಂದಿನ ಕಾಲದ ಕಷ್ಟದ ದಿನಗಳ ಅರಿವು ಮೂಡಿಸದಿದ್ದರೆ ಮುಂದೆ ಎದುರಾಗಲಿರುವ ಕಷ್ಟದ ದನಗಳನ್ನು ಎದುರಿಸುವ ಶಕ್ತಿ ಬರುವುದಿಲ್ಲ ಎಂದು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಅಳಿಯೂರು ಇದರ ಅಧ್ಯಕ್ಷರೂ ಆಗಿರುವ ಕಂದಿರು ಶ್ರೀ ಆದಿಶಕ್ತಿ ದುರ್ಗಾಂಬಿಕಾ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಸೋಮನಾಥ ಶಾಂತಿ ನುಡಿದರು.
ಬಿಲ್ಲವ ಶಕ್ತಿ ಮಾರೂರು ಇದರ ವತಿಯಿಂದ ಆ. 9 ರಂದು ಮಾರೂರಿನ ಜೈ ಭವಾನಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿಲ್ಲವ ಶಕ್ತಿ ಮಾರೂರಿನ ಅಧ್ಯಕ್ಷ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವಾರಾಧಕ ಗೋಪಾಲ ಎ. ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಭಾಗಹಿಸಿದ್ದ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಸಾಧು ಸನಿಲ್ ಅವರು ಮಾತನಾಡಿ ಬಿಲ್ಲವ ಸಮಾಜದ ಪ್ರತಿಯೊಂದು ಮನೆಗೆ ಆರೋಗ್ಯ ಕಾರ್ಡ್ ಒದಗಿಸುವ ಕಾರ್ಯ ನಡೆಯಬೇಕು ಅಂತೆಯೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಮ್ಮ ಸಮಾಜದ ಮಕ್ಕಳನ್ನು ಅಣಿಗೊಳಿಸುವ ಕಾರ್ಯವೂ ನಡೆಯಬೇಕು. ಸಮಾಜದ ಯುವಕರು ಸೇವಾ ಭಾವದಿಂದ ಒಗ್ಗೂಡಿ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಬಿಲ್ಲವ ಶಕ್ತಿ ಮಹಾಶಕ್ತಿಯಾಗಿ ಮೂಡಿಬರಲು ಸಾಧ್ಯ ಎಂದರು.

ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ರಂಜಿತ್ ಪೂಜಾರಿ, ಮೂಡುಬಿದಿರೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ದಿನೇಶ್ ಮಾತನಾಡಿ ಶುಭ ಹಾರೈಸಿದರು. ಸಮಾಜದ ಹಿರಿಯವರಾದ ಪಂಡಿಬೆಟ್ಟು ಕೊರಗಪ್ಪ ಪೂಜಾರಿ, ಕೆದಿಗುತ್ತು ಶುಭಕರ ಪೂಜಾರಿ, ಕೆಮ್ಮಾರು ಶ್ರೀಧರ ಪೂಜಾರಿ, ದೀಕ್ಷಿತ್, ನಾರಾಯಣ ಪೂಜಾರಿ ಬಾಣಿಲು, ರವಿರಾಜ ಪಾಂಡಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಚಂದ್ರಹಾಸ ಸನಿಲ್ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವಾರಾಧಕ ಗೋಪಾಲ ಎ. ಕೋಟ್ಯಾನ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಶೇ. 90ಕ್ಕೂ ಹೆಚ್ಚು ಅಕಗಳಿಸಿರುವ ಪಿಯುಸಿಯ ಮನೀಷ ಎಎಚ್. ಪೂಜಾರಿ, ಸಂಕೇತ್ ವಿಜಯ ಸುವರ್ಣ, ಸೋನಲ್ ಎಸ್., ಎಸ್ಸೆಸ್ಸೆಲ್ಲಿಯ ಶ್ರಾವ್ಯ ಸತೀಶ್ ಪೂಜಾರಿ, ಜೀವಿಕಾ ಜಿ. ಕೋಟ್ಯಾನ್ ಮತ್ತು ಜೀವಿತಾ ಜಿ. ಕೋಟ್ಯಾನ್ ಅವರಿಗೆ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು. ಬಹುಮುಖ ಪ್ರತಿಭೆ ಪ್ರಕೃತಿ ಮಾರೂರು ಅವರಿಗೆ ಮುರಳೀಧರನ್ ಪ್ರಾಜೋಜಿತ ನಗದು ಪುರಸ್ಕಾರ ನೀಡಲಾಯಿತು. ಬಿಲ್ಲವ ಸಮಾಜದ 5 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ನಿಶಾ ಪೂಜಾರಿ ಮೇಲಂತಗುಡ್ಡೆಯವರ ಚಿಕಿತ್ಸೆಗೆ ಸಂತೋಷ್ ಪೂಜಾರಿ ನೆತ್ತೋಡಿ ಪ್ರಾಯೋಜಿತ ಸಹಾಯಧನ ವಿತರಿಸಲಾಯಿತು.

ಶಂಕರ ಎ. ಕೋಟ್ಯಾನ್ ಸ್ವಾಗತಿಸಿದರು. ಸುಶಾಂತ್ ಕರ್ಕೇರಾ ಪ್ರಸ್ತಾವನೆಗೈದರು. ಅಶೋಕ್ ಬಿ. ಪೂಜಾರಿ ವಾರ್ಷಿಕ ವರದಿ ಮಂಡಿಸಿದರು. ಸವಿತಾ ನಿತ್ಯಾನಂದ ಪುರಸ್ಕೃತರ ಪಟ್ಟಿ ವಾಚಿಸಿದರು. ಶಾಂತಿ ರವಿ ಮತ್ತು ಲಕ್ಷ್ಮಿ ಸನ್ಮಾನ ಪತ್ರ ವಾಚಿಸಿದರು. ರಕ್ಷಾ ಮತ್ತು ಕಾವ್ಯ ಪ್ರಾರ್ಥಿಸಿದರು. ಚೈತ್ರಾ ವಿಶ್ವನಾಥ ನೆತ್ತೋಡಿ ನಿರೂಪಿಸಿದ ಕಾರ್ಯಕ್ರಮದಲ್ಲಿ ದಿನೇಶ್ ಪೂಜಾರಿ ವಂದಿಸಿದರು.