ಮೂಡುಬಿದಿರೆ : ತುಳುನಾಡಿನ ಸಾಂಪ್ರದಾಯಿಕ ಆಚರಣೆ ಹಾಗೂ ಆಹಾರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ವಿಶ್ವ ತುಳುವೆರ್ ಸಂಘಟನೆ (ರಿ.), ಮಂಗಳೂರು ಹಾಗೂ ಎಕ್ಸಲೆಂಟ್ ಪಿಯು ಕಾಲೇಜು, ಕಲ್ಲಬೆಟ್ಟು, ಮೂಡುಬಿದಿರೆ ಇವರ ಜಂಟಿ ಸಹಯೋಗದಲ್ಲಿ ಆಟಿದ ಅಮವಾಸ್ಯೆ ಪ್ರಯುಕ್ತ ಪಾಲೆದ ಕೆತ್ತೆದ ಕಷಾಯ ಮತ್ತು ಮೆಂತೆದ ಗಂಜಿ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮವು ಆಗಸ್ಟ್ 12, 2026ರ ಬುಧವಾರ ಬೆಳಿಗ್ಗೆ 5ರಿಂದ 9 ಗಂಟೆಯವರೆಗೆ ಮೂಡುಬಿದಿರೆಯ ಛಾಯಾ ಕಂಪ್ಯೂಟರ್ ರೈಸ್ ಮಿಲ್, ರೆಂಜರ್ ಫಾರೆಸ್ಟ್ ಆಫೀಸ್ ರಸ್ತೆ ಸಮೀಪ ನಡೆಯಲಿದೆ.
ತುಳುನಾಡಿನ ಆಟಿ ತಿಂಗಳ ವಿಶೇಷ ಆಚರಣೆಗಳಲ್ಲಿ ಒಂದಾಗಿರುವ ಪಾಲೆದ ಕೆತ್ತೆದ ಕಷಾಯ ಹಾಗೂ ಮೆಂತೆದ ಗಂಜಿಯ ಮಹತ್ವವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತುಳುವರ ಸಂಸ್ಕೃತಿ, ಸಂಪ್ರದಾಯ ಹಾಗೂ ಪಾರಂಪರಿಕ ಆಹಾರ ಪದ್ಧತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಆಶಯದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮಕ್ಕೆ ಮುರಾರ್ಜಿ ದೇಸಾಯಿ ವಸತಿ ಶಾಲೆ, ಕಲ್ಲಬೆಟ್ಟು, ಮೂಡುಬಿದಿರೆ, ತುಳುನಾಡ ಬಂಧು-ಬಾಂಧವರು ಹಾಗೂ ಹಿತೈಷಿಗಳು ಸಹಕಾರ ನೀಡುತ್ತಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಾಲೆದ ಕೆತ್ತೆದ ಕಷಾಯ ಹಾಗೂ ಮೆಂತೆದ ಗಂಜಿ ಸ್ವೀಕರಿಸುವ ಮೂಲಕ ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಆಚರಣೆಯಲ್ಲಿ ಪಾಲ್ಗೊಳ್ಳುವಂತೆ ವಿಶ್ವ ತುಳುವೆರ್ ಸಂಘಟನೆ ಹಾಗೂ ಆಯೋಜಕರು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.

