ಕುಂದಾಪುರ : ಟೀಮ್ ಮೆಟ್ಟಿನಹೊಳೆ,ಕ್ಯಾಡ್ ಫೌಂಡೇಶನ್ , ಪ್ರಾಥಮಿಕ ಆರೋಗ್ಯ ಕೇಂದ್ರ ನಾಡ ಹಾಗೂ ನಾಡ ಗ್ರಾಮಸ್ಥರ ಜಂಟಿ ಸಹಯೋಗದಲ್ಲಿ ಮಂಗಳೂರು ಕೆ.ಎಮ್.ಸಿ.ಆಸ್ಪತ್ರೆ ಹೃದಯ ರೋಗ ತಜ್ಞರಾದ ಡಾ ಪದ್ಮನಾಭ ಕಾಮತ್ ಅವರು ಪ್ರಾಥಮಿಕ ಆರೋಗ್ಯ ಕೇಂದ್ರ ನಾಡಕ್ಕೆ ಉಚಿತವಾಗಿ ಇ.ಸಿ.ಜಿ. ಯಂತ್ರದ ಹಸ್ತಾಂತರ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಡಾ.ಪ್ರೇಮಾನಂದ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಖ್ಯಾತ ಸಂಗೀತಗಾರ್ತಿ ವಿಜಯಲಕ್ಷ್ಮಿ ಕುಲಾಲ್ ಮೆಟ್ಟಿನಹೊಳೆ,ಡಾ.ಪ್ರೇರಣಾ, ಪ್ರದೀಪ ಕುಮಾರ್ ಬಸ್ರೂರು,ಗೋಪಾಲಕೃಷ್ಣ ನಾಡ,ಸುರೆಂದ್ರ ನಾಡ,ಸತೀಶ.ಕೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಟೀಮ್ ಮೆಟ್ಟಿನಹೊಳೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ವರ್ಗ,ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಹಾಗೂ ಧನ್ಯವಾದವನ್ನು ಕುಮಾರಿ ಅನುಶ್ರೀ ಜಡ್ಕಲ್ ನಡೆಸಿದರು.

