ನವಕಿರಣ್ ನವತಾರೆ ಸೇವಾ ವೇದಿಕೆ ಬ್ರಹ್ಮಾವರ ಆಷಾಡ ಸಂಭ್ರಮದ ವೈಭವ

0
14

ಉಡುಪಿ : ನವಕಿರಣ್ ನವತಾರೆ ಸೇವಾ ವೇದಿಕೆ ಬ್ರಹ್ಮಾವರ ಇವರ ಆಶ್ರಯದಲ್ಲಿ 5 ನೇ ವರ್ಷದ ಆಷಾಡ ಸಂಭ್ರಮ ಕಾರ್ಯಕ್ರಮವು ದೇವಿ ಪಿಯೂಷ್ ಸಭಾ ಭವನದಲ್ಲಿ ಆಗಸ್ಟ್ 9 ರಂದು ಜರುಗಿತು.

ಸಮಾರಂಭದ ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷರಾದ ಕುಸುಮ ಮನೋಜ್ ಅವರು ವಹಿಸಿದರು.

ಮುಖ್ಯ ಭಾಷಣಕಾರರಾಗಿ ಟಿ.ಎಮ್.ಎಂ ಪೈ ಪ್ರೌಢಶಾಲೆಯ ಶಿಕ್ಷಕಿ ಸುರೇಖಾ ಶೆಟ್ಟಿಯವರು ಭಾಗವಹಿಸಿದರು. ಮುಖ್ಯ ಅತಿಥಿಗಳಾಗಿ ಜ್ಯೋತಿ ಉದಯ್ ಪೂಜಾರಿ,ಲೀಲಾವತಿ ಗಂಗಾಧರ್, ಸುಲತಾ ಹೆಗ್ಡೆ, ಅಮಿತಾ, ಆಲ್ವಿನ್ ಅಂದ್ರಾದೆ, ಮಂದಾರ ಶೆಟ್ಟಿ, ನ್ಯಾಯವಾದಿಗಳಾದ ಮೇಘನಾ ಶೆಟ್ಟಿ, ಇಂದಿರಾ ಉಮೇಶ್, ಸುಜಾತ ಶೆಟ್ಟಿ, ರಾಗಿಣಿ, ಸುನೀತಾ ದೇವರಾಜ್, ಭಾಗವಹಿಸಿದರು.

ಸಂಘದ ಕಾರ್ಯದರ್ಶಿ ನೈನಾ ಜೆ.ಶೆಟ್ಟಿಯವರು ಸ್ವಾಗತಿಸಿದರು, ಸಂಘದ ಸದಸ್ಯೆ ಸಪ್ತಸ್ವರ ಮೆಲೋಡಿಸ್ ನ ಮಾಲಕಿ ಸವಿತಾ ಜೋಗಿ ಹಾಗೂ ತಂಡದ ಸದಸ್ಯರು ಸೇರಿ ನೀಡಿದ ಭಕ್ತಿ ಗೀತೆ, ಜಾನಪದ ಗೀತೆ, ಹಾಗೂ ಭಾವಗೀತೆಯೊಂದಿಗೆ ನೀಡಿದ ನೃತ್ಯ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಸಂಘದ ಗೌರವ ಅಧ್ಯಕ್ಷರಾದ ಮಮತಾ ಶೆಟ್ಟಿ, ಉಪಾಧ್ಯಕ್ಷರಾದ ಶಶಿಕಲಾ, ಶುಭಲಕ್ಮಿ, ಗೀತಾ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಜ್ಯೋತಿ ಶೆಟ್ಟಿ, ಸಂದ್ಯಾಶೆಟ್ಟಿ, ಲತಾ ಶೆಟ್ಟಿ, ಕೋಶಾಧಿಕಾರಿ ಭವಾನಿ ಮುಂತಾದವರು ಉಪಸ್ಥಿತರಿದ್ದರು.

ಸಂಘದ ಸದಸ್ಯೆ ಭಾರತಿ ದಿನೇಶ್ ರಾವ್ ಧನ್ಯವಾದ ನೀಡಿದರು . ವೇದಿಕೆಯ ಸಂಚಾಲಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಮೇಶ ಪೂಜಾರಿ ಅವರು ಕಾರ್ಯಕ್ರಮ ನಿರೂಪಿಸಿದರು..