ಸ್ಥಳೀಯ ಆವಿಷ್ಕಾರಗಳ ಮೂಲಕ ಮಿಂಚಿದ ಯುವಶಕ್ತಿಗಳೇ ದಕ್ಷಿಣ ಕನ್ನಡದ ‘ಬೊಲ್ಪು’

0
10

ಗ್ರಾಸ್ರೂಟ್ ಇನ್ನೋವೇಟರ್ ರೆಕಗ್ನಿಷನ್ ಪುರಸ್ಕೃತರಿಗೆ ಸಂಸದ ಕ್ಯಾ. ಚೌಟ ಅಭಿನಂದನೆ

ನವದೆಹಲಿ : ಸ್ಥಳೀಯ ಸಂಶೋಧನೆಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ಕೀರ್ತಿ ತಂದ ಯುವಶಕ್ತಿಗಳೇ ನಮ್ಮ ದಕ್ಷಿಣ ಕನ್ನಡದ ‘ಬೊಲ್ಪು’ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ನೀತಿ ಆಯೋಗದ ’ಅಟಲ್ ಇನ್ನೋವೇಶನ್ ಮಿಷನ್ ’ (AIM) ಅಡಿಯಲ್ಲಿ ‘ಗ್ರಾಸ್ರೂಟ್ ಇನ್ನೋವೇಟರ್ ರೆಕಗ್ನಿಷನ್ 2026’ ಗೌರವಕ್ಕೆ ಭಾಜನರಾದ ಅಕ್ಷಯ್ ಮಾಶೇಲ್ಕರ್ (ಎಕ್ಸ್‌ಪರಿಮೈಂಡ್ ಲ್ಯಾಬ್ಸ್ ಪ್ರೈ. ಲಿ.), ಅನುಷಾ ಪ್ರಜ್ವಲ್ (ಮಾವೇದಾಸ್ ಫುಡ್ಸ್ ಆಂಡ್ ಸಿರಿಯಲ್ಸ್ ಪ್ರೈ. ಲಿ.) ಹಾಗೂ ರತ್ನಾಕರ ನಾಯಕ್ (ಡಬ್ಲ್ಯೂ.ಡಬ್ಲ್ಯೂ.ಆರ್. ಇನ್ನೋವೇಶನ್ಸ್ ಪ್ರೈ. ಲಿ.) ಅವರು ನವದೆಹಲಿಯ ತಮ್ಮ ನಿವಾಸದಲ್ಲಿ ಅಭಿನಂದಿಸಿ ಮಾತನಾಡಿದರು.

ಸಂಸದರಿಂದ ಅಭಿನಂದನೆ ಸ್ವೀಕರಿಸಿದ ಜಿಲ್ಲೆಯ ಮೂವರು ಇನ್ನೋವೇಟರ್ಸ್ ತಮ್ಮ ಆವಿಷ್ಕಾರದ ಪಯಣವನ್ನು ಹಂಚಿಕೊಂಡರು. ತಮ್ಮ ತಂತ್ರಜ್ಞಾನ ಹಾಗೂ ಹೊಸ ಆಲೋಚನೆಗಳು ಗ್ರಾಮೀಣ ಮತ್ತು ತಳಮಟ್ಟದಲ್ಲಿ ಹೇಗೆ ಸಕಾರಾತ್ಮಕ ಬದಲಾವಣೆ ತರುತ್ತಿವೆ ಎಂಬುದನ್ನು ವಿವರಿಸಿದರು.

ಇದೇ ವೇಳೆ ದೇಶಾದ್ಯಂತ ಆಯ್ಕೆಯಾದ 26 ನವೋದ್ಯಮಿಗಳ ಪೈಕಿ ದಕ್ಷಿಣ ಕನ್ನಡಕ್ಕೆ ರಾಷ್ಟ್ರ ಮಟ್ಟದಲ್ಲಿ ಕೀರ್ತಿ ತಂದ ಈ ಮೂವರು ಸ್ಟಾರ್ಟ್ಅಪ್‌ಗಳ ಸಂಸ್ಥಾಪಕರ ಸಾಧನೆಯನ್ನು ಸಂಸದರು ಮುಕ್ತಕಂಠದಿಂದ ಶ್ಲಾಘಿಸಿದರು. ನೈಜ ಜಗತ್ತಿನ ಸವಾಲುಗಳಿಗೆ ತಂತ್ರಜ್ಞಾನ ಹಾಗೂ ಆವಿಷ್ಕಾರಗಳ ಮೂಲಕ ಪರಿಹಾರ ಮೂಲಕ ಸಮಾಜಕ್ಕೆ ಉಪಯುಕ್ತವಾಗುವಂತಹ ಇನ್ನಷ್ಟು ಹೊಸ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು ನೀಡಿದರು. ಅಲ್ಲದೆ, ಕರಾವಳಿ ಭಾಗದಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಅಗತ್ಯವಿರುವ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

“ಸ್ಥಳೀಯ ಸಂಶೋಧನೆಗಳು ಮತ್ತು ಸ್ವಾವಲಂಬನೆಯು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ವಿಕಸಿತ ಭಾರತ 2047 ಗುರಿಯನ್ನು ತಲುಪಲು ಅಡಿಪಾಯವಾಗಿದೆ. ತಂತ್ರಜ್ಞಾನ, ಕೃಷಿ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಸ್ಥಳೀಯ ಆವಿಷ್ಕಾರಗಳು ದೇಶವನ್ನು ಆರ್ಥಿಕವಾಗಿ ಬಲಪಡಿಸುತ್ತಿವೆ. ನಮ್ಮ ದಕ್ಷಿಣ ಕನ್ನಡದ ಯುವ ಉದ್ಯಮಿಗಳು ಹಾಗೂ ಆವಿಷ್ಕಾರಕರು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ. ಸ್ಥಳೀಯ ಸವಾಲುಗಳಿಗೆ ಜಾಗತಿಕ ಮಟ್ಟದ ಪರಿಹಾರ ಕಂಡುಕೊಳ್ಳುವ ನಮ್ಮ ಕರಾವಳಿಯ ಪ್ರತಿಭೆಗಳಿಗೆ ಬೇಕಾದ ಅಗತ್ಯ ಪ್ರೋತ್ಸಾಹ ನೀಡಲು ಬದ್ಧ – ಕ್ಯಾ. ಬ್ರಿಜೇಶ್ ಚೌಟ