ಶ್ರೀ ಗೋಪಾಲಕೃಷ್ಣ ದೇವಸ್ಥಾನದ 110ನೇ ವರ್ಷದ ಮೊಸರು ಕುಡಿಕೆ ಉತ್ಸವ: ‘ಮುದ್ದು ಕೃಷ್ಣ’ ವಿಡಿಯೋ ಸ್ಪರ್ಧೆಗೆ ಆಹ್ವಾನ

0
14

ಮೂಡುಬಿದಿರೆ : ಶ್ರೀ ಗೋಪಾಲಕೃಷ್ಣ ದೇವಸ್ಥಾನದ 110ನೇ ವರ್ಷದ ಮೊಸರು ಕುಡಿಕೆ ಉತ್ಸವದ ಅಂಗವಾಗಿ ಜವನೆರ್ ಬೆದ್ರ ಫೌಂಡೇಶನ್ (ರಿ.) ವತಿಯಿಂದ ‘ಕೃಷ್ಣೋತ್ಸವ–2026’ ಪ್ರಯುಕ್ತ ‘ಮುದ್ದು ಕೃಷ್ಣ’ ವಿಡಿಯೋ ಸ್ಪರ್ಧೆ ಆಯೋಜಿಸಲಾಗಿದೆ.

ಸ್ಪರ್ಧೆಯನ್ನು ಮೂರು ವಿಭಾಗಗಳಲ್ಲಿ ನಡೆಸಲಾಗುತ್ತಿದ್ದು, 1 ರಿಂದ 2 ವರ್ಷ, 2 ರಿಂದ 5 ವರ್ಷ (Landscape Video ಮಾತ್ರ) ಹಾಗೂ 5 ರಿಂದ 8 ವರ್ಷ ವಯೋಮಿತಿಯ ಮಕ್ಕಳಿಗೆ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವ ವಿಡಿಯೋ ಒಂದು ನಿಮಿಷಕ್ಕಿಂತ ಹೆಚ್ಚಿರಬಾರದು. ಮಕ್ಕಳ ಜನನ ಪ್ರಮಾಣಪತ್ರ (Birth Certificate) ಕಡ್ಡಾಯವಾಗಿದ್ದು, ಯಾವುದೇ ಥೀಮ್‌ನಲ್ಲಿ ವಿಡಿಯೋ ತಯಾರಿಸಬಹುದು. ವಿಡಿಯೋದಲ್ಲಿ ಎರಡು ಮಂದಿಗಿಂತ ಹೆಚ್ಚು ಇರಬಾರದು. ಯಾವುದೇ ಭಾಷೆಯ ಹಾಡುಗಳನ್ನು ಬಳಸಲು ಅವಕಾಶವಿದ್ದು, ವಿಡಿಯೋಗೆ ಎಡಿಟಿಂಗ್ ಕೂಡ ಮಾಡಬಹುದಾಗಿದೆ.

ಸ್ಪರ್ಧೆಗೆ ಬಂದಿರುವ ವಿಡಿಯೋಗಳಲ್ಲಿ ಅತ್ಯಧಿಕ ಲೈಕ್ಸ್ (Likes) ಪಡೆದ ವಿಡಿಯೋವನ್ನು ವಿಜೇತರಾಗಿ ಆಯ್ಕೆ ಮಾಡಲಾಗುತ್ತದೆ. ತೀರ್ಪಿನ ಕುರಿತು ಯಾವುದೇ ರೀತಿಯ ಚರ್ಚೆಗೆ ಅವಕಾಶವಿರುವುದಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ.

ಸ್ಪರ್ಧೆಯು ಆಗಸ್ಟ್ 1ರಿಂದ ಆಗಸ್ಟ್ 31, 2026ರವರೆಗೆ ನಡೆಯಲಿದ್ದು, ಫಲಿತಾಂಶವನ್ನು ಸೆಪ್ಟೆಂಬರ್ 3, 2026ರಂದು ಪ್ರಕಟಿಸಲಾಗುತ್ತದೆ.

ಭಾಗವಹಿಸಲು ಇಚ್ಛಿಸುವವರು ತಮ್ಮ ವಿಡಿಯೋವನ್ನು WhatsApp ಸಂಖ್ಯೆ +91 86606 37663ಕ್ಕೆ ಕಳುಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.