ಬ್ರಹ್ಮಾವರ : ಉದ್ಯಮ ಪ್ರಾರಂಭಿಸುವಾಗ ಪ್ರಾರಂಭದಲ್ಲಿ ತುಂಬಾ ಕಷ್ಟ ನಷ್ಟಗಳು ಬರುತ್ತದೆ ಅದನ್ನು ಸಹನೆಯಿಂದ ತಾಳಿಕೊಂಡು ಮುಂದುವರಿಯಬೇಕು ಎಂದು ರಾಧಾಕೃಷ್ಣ ಕಂಪ್ಯೂರ‍್ಸ್, ಕೆಮ್ಮಣ್ಣು ಇದರ ಮಾಲಕರಾದ ವೆಂಕಟೇಶ್ ನಾಯ್ಕ್ ಅಭಿಪ್ರಾಯಪಟ್ಟರು.
ಅವರು ರುಡ್‌ಸೆಟ್ ಸಂಸ್ಥೆ, ಬ್ರಹ್ಮಾವರದಲ್ಲಿ 38 ದಿನಗಳ ಕಾಲ ನಡೆಯುವ “ಕಂಪ್ಯೂಟರ್ ಅಸಿಸ್ಟೆಂಟ್ ಬುಕ್ ಕೀಪರ್” ತರಬೇತಿಯ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಜ್ಯೋತಿ ಬೆಳಗಿಸುವುದರ ಮುಖಾಂತರ ಉದ್ಘಾಟಿಸಿ, ಶಿಭಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದು ಸಹನೆ ಮತ್ತು ಆಲಿಸುವ ಶಕ್ತಿ ಉದ್ದಿಮೆಯನ್ನು ಪ್ರಾರಂಬಿಸಲು ಹಾಗೂ ನಿರ್ವಹಿಸಲು ತುಂಬಾ ಮುಖ್ಯವಾಗಿದೆ.
ವ್ಯವಹಾರದಲ್ಲಿ ನಾವು ಕಲಿಯುವಂತದ್ದು ತುಂಬಾ ಇದೆ, ಪ್ರತಿ ದಿನವೂ ಕಲಿಯುತ್ತಾ ವ್ಯವಹಾರದಲಿ ಬೆಳೆಯಿರಿ. ಜೀವನದಲ್ಲಿ ನೀವು ಬೆಳೆಯಲು ಕಾರಣವಾದ ವ್ಯಕ್ತಿ, ಸಂಸ್ಥೆಗಳನ್ನು ಮರೆಯಬೇಡಿ. ನಾನು ರುಡ್‌ಸೆಟ್ ಸಂಸ್ಥೆಯಲ್ಲಿ ತರಬೇತಿ ಮಾಡಿ ಈಗ ಸ್ವ ಉದ್ಯಮವನ್ನು ನಡೆಸುತ್ತಿದ್ದೇನೆ. ನೀವು ಈ ಸಂಸ್ಥೆಯಲ್ಲಿ ತರಬೇತಿ ಮಾಡಿ ಮುಂದೆ ಯಶಸ್ವಿ ಸ್ವ ಉದ್ಯೋಗಿಗಳಾಗಿ ಬೆಳೆಯಿರಿ ಎಂದು ಹೇಳಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ. ಬೊಮ್ಮಯ್ಯ ಎಮ್, ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸದುಪಯೋಗಪಡಿಸಿಕೊಂಡು ನಿಮ್ಮ ಉದ್ಯಮದಲ್ಲಿ ಯಶಸ್ವಿಯಾಗಿ ಎಂದು ಶುಭ ಹಾರೈಸಿದರು.
ಹಿರಿಯ ಉಪನ್ಯಾಸಕರಾದ ಸಂತೋಷ್ ಶೆಟ್ಟಿ ನಿರೂಪಿಸಿ, ಸ್ವಾಗತಿಸಿ, ಹಿರಿಯ ಕಛೇರಿ ಸಹಾಯಕರಾದ ರವಿ ವಂದಿಸಿದರು. ಈ ತರಬೇತಿಯಲ್ಲಿ ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಹಾಗೂ ಇತರ ಜಿಲ್ಲೆಯ 34 ಜನ ಶಿಭಿರಾರ್ಥಿಗಳು ಭಾಗವಹಿಸಿದ್ದರು.

